ರಾಜ್ಯ ಗೃಹರಕ್ಷಕ ದಳ, ಪೌರರಕ್ಷಣಾ ಇಲಾಖೆ ಕ್ರೀಡಾಕೂಟ:ಉಡುಪಿ ಗೃಹರಕ್ಷಕ ದಳಕ್ಕೆ ಚಾಂಪಿಯನ್ ಪ್ರಶಸ್ತಿ

ಉಡುಪಿ, ಫೆ.14: ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಶ್ಚಿಮ ವಲಯದಿಂದ ಡೆಪ್ಯುಟಿ ಕಮಾಂಡೆಂಟ್ ರಮೇಶ್ ನೇತೃತ್ವದ ತಂ ಅತ್ಯುತ್ತಮ ಪ್ರದರ್ಶನ ನೀಡಿದೆ.
ಇದರಲ್ಲಿ ಉಡುಪಿ ಗೃಹರಕ್ಷಕ ದಳದ ಹಲವು ಕ್ರೀಡಾಪಟುಗಳು ಪದಕಗಳನ್ನು ಜಯಿಸಿದ್ದಾರೆ. ಮಹಿಳೆಯರ 100 ಮೀ. ಓಟದಲ್ಲಿ ಪ್ರಥಮ, 100 ಮೀ. ರಿಲೇ ಪ್ರಥಮ, ಪುರುಷರ ವಿಭಾಗದ 100 ಮೀ.ನಲ್ಲಿ ಪ್ರಥಮ, 800 ಮೀ.ನಲ್ಲಿ ದ್ವಿತೀಯ ಸ್ಥಾನವನ್ನು ಉಡುಪಿಯ ಕ್ರೀಡಾಪಟುಗಳು ಪಡೆದಿದ್ದಾರೆ.
ಇನ್ನು 100 ರಿಲೇಯಲ್ಲಿ ದ್ವಿತೀಯ, ವಾಲಿಬಾಲ್ ದ್ವಿತೀಯ ಹಾಗೂ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಜಿಲ್ಲಾ ಸಮಾದೇಷ್ಟಡಾ.ಕೆ. ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.
Next Story





