ಫೆ.15 ರಂದು ಎಸ್‌ವೈಎಸ್ ಸಮ್ಮೇಳನಕ್ಕೆ ಚಾಲನೆ

ವಿಟ್ಲ,ಫೆ.15 : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್‌ವೈಎಸ್) ವತಿಯಿಂದ ರಾಜ್ಯಾದ್ಯಂತ ಎಲ್ಲಾ ಸೆಂಟರ್ ಮಟ್ಟಗಳಲ್ಲಿ ನಡೆಸಲುದ್ದೇಶಿಸಿರುವ ಸಮ್ಮೇಳನಗಳಿಗೆ ಫೆಬ್ರವರಿ 15 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಸೆಂಟರ್ ವ್ಯಾಪ್ತಿಯ ಕುದುರುಗುಂಡಿಯಲ್ಲಿ ಚಾಲನೆ ದೊರೆಯಲಿದೆ ಎಂದು ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಕೆ. ಉಮರ್ ಸಖಾಫಿ ಕಂಬಳಬೆಟ್ಟು ತಿಳಿಸಿದರು.
ಬಿ.ಸಿ.ರೋಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ವಿವಿಧ ಜಿಲ್ಲೆಗಳ ಎಲ್ಲಾ ವಲಯಗಳಲ್ಲೂ ಒಳಿತಿಗಾಗಿ ಒಗ್ಗಟ್ಟು ಎಂಬ ಘೋಷ ವಾಕ್ಯದೊಂದಿಗೆ ಫೆ. 15 ರಿಂದ ಮೇ 15 ರತನಕ ಮೂರು ತಿಂಗಳಲ್ಲಿ ಸಮ್ಮೇಳನಗಳು ನಡೆಯಲಿರುವುದು.
ಸಮ್ಮೇಳನಗಳ ಅಂಗವಾಗಿ ಸದ್ಭಾವನಾ ಜಾಥಾ, ವಿಶೇಷ ತರಬೇತಿ ಶಿಬಿರ ಹಾಗೂ ಎಸ್‌ವೈಎಸ್ ಸಾಂತ್ವನ ಯೋಜನೆಗೆ ಚಾಲನೆ ನೀಡಲಾಗುವುದು ಎಂದ ಅವರು ಕೊಪ್ಪದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೇರಳ ರಾಜ್ಯ ಎಸ್‌ವೈಎಸ್ ಅಧ್ಯಕ್ಷ ಪೇರೋಡು ಅಬ್ದುರ್ರಹ್ಮಾನ್ ಸಖಾಫಿ, ಕಿಲ್ಲೂರು ತಂಙಳ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ದ.ಕ. ಜಿಲ್ಲಾಧ್ಯಕ್ಷ ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ, ರಾಜ್ಯ ಸಮಿತಿ ಸದಸ್ಯ ಅಶ್ರಫ್ ಕಿನಾರ ಮೊದಲಾದವರು ಉಪಸ್ಥಿತರಿದ್ದರು.







