ಅಕ್ರಮ ಮರಳು ಸಾಗಾಟ: ಎರಡು ವಾಹನ ವಶ, ಒಬ್ಬನ ಬಂಧನ
ಮಂಗಳೂರು, ಫೆ. 14: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಕಂಕನಾಡಿ ಠಾಣಾ ಪೊಲೀಸರು ಮಂಗಳವಾರ ವಶಕ್ಕೆ ಪಡೆದು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಜೆಪ್ಪಿನಮೊಗರಿನಿಂದ ಕದ್ರಿಯತ್ತ ಸಾಗುತ್ತಿದ್ದ ಅಕ್ರಮ ಮರಳು ಹೊಂದಿದ್ದ ಟಿಪ್ಪರ್‌ವೊಂದನ್ನು ಪೊಲೀಸರು ಪಂಪ್‌ವೆಲ್ ಬಳಿ ತಡೆದಿದ್ದು, ಈ ಸಂದರ್ಭದಲ್ಲಿ ಚಾಲಕ ಪರಾರಿಯಾಗಿದ್ದಾನೆ.
ಇನ್ನೊಂದು ಪ್ರಕರಣದಲ್ಲಿ ಮಂಗಳೂರಿನಿಂದ ಕೇರಳದತ್ತ ಪಿಕ್‌ಅಪ್ ವಾಹನದಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಕೇರಳದ ದೇವದಾಸ್ ಶೆಟ್ಟಿ (45) ಎಂಬಾತನನ್ನು ಉಳ್ಳಾಲ ಸೇತುವೆಯ ಬಳಿ ಪೊಲೀಸರು ಬಂಧಿಸಿ, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಾಹನದ ಮಾಲಕ ಕೇರಳದ ಜಯರಾಮ ಶೆಟ್ಟಿ ಎನ್ನಲಾಗಿದೆ. ದೇವದಾಸ್ ಶೆಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಂಕನಾಡಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ರವಿ ನಾಯ್ಕ್ ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.
Next Story





