ಹೋಂಡ ಸಿಟಿ ಹೊಸ ಕಾರು ಬಿಡುಗಡೆ

ಮಂಗಳೂರು, ಫೆ.14: ನಗರದ ಕೊಟ್ಟಾರಚೌಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಪೆನಿನ್‌ಸುಲರ್ ಹೋಂಡ ಶೋರೂಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾರಿಗೆ ಉಪಾಯುಕ್ತ ರಮೇಶ್ ಎಂ.ವೆರ್ಣೇಕರ್ ಅವರು ನೂತನ ಹೋಂಡಾ ಸಿಟಿ 2017 ಕಾರ್ ಅನ್ನು ಅನಾವರಣಗೊಳಿಸಿದರು.
ಪಟೇಲ್ ಕಾರ್ಸ್ ಪ್ರೈ.ಲಿಮಿಟೆಡ್‌ನ ಆಡಳಿತ ನಿರ್ದೇಶಕ ವಿನೋದ್ ಪಟೇಲ್, ಹೋಂಡಾ ಕಾರ್ಸ್ ಇಂಡಿಯಾದ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಪ್ರಣೀತ್ ಸಂಚೇತಿ, ವ್ಯಾಪಾರ ವಿಭಾಗದ ಮುಖ್ಯಸ್ಥ ಬಾಲಕೃಷ್ಣನ್, ಮಾರಾಟ ವಿಭಾಗದ ಮುಖ್ಯಸ್ಥ ಮಲ್ಲೇಶ್ ಯಾದವ್ ಉಪಸ್ಥಿತರಿದ್ದರು. ಹೊಸ ಹೋಂಡಾ ಸಿಟಿ ಕಾರು ಡೀಸೆಲ್ ಮತ್ತು ಪೆಟ್ರೋಲ್ ಎರಡೂ ವಿಧದಲ್ಲಿ ಲಭ್ಯವಿದ್ದು ಇದರ ಎಕ್ಸ್-ಶೋರೂಂ ಬೆಲೆ 8.64 ಲಕ್ಷಗಳಿಂದ ಆರಂಭವಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story





