ಭಾರತದ ಮೊದಲ ಕ್ರೀಡಾ ಸಾಹಿತ್ಯ ಹಬ್ಬಕ್ಕೆ ಪುಣೆ ಆತಿಥ್ಯ
ಪುಣೆ, ಫೆ.14: ಭಾರತದಲ್ಲಿ ಮೊತ್ತ ಮೊದಲ ಬಾರಿ ನಡೆಯಲಿರುವ ಕ್ರೀಡಾ ವಿಶೇಷಗಳಿರುವ ಸಾಹಿತ್ಯ ಹಬ್ಬಕ್ಕೆ ಪುಣೆ ನಗರ ಆತಿಥ್ಯವಹಿಸಿಕೊಳ್ಳಲಿದೆ.
ಕ್ರೀಡಾ ಸಾಹಿತ್ಯ ಹಬ್ಬ ಫೆ.21 ಹಾಗೂ 22 ರಂದು ನಡೆಯಲಿದ್ದು, ಭಾರತದ ನಾಯಕ ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಆಸ್ಟ್ರೇಲಿಯದ ಲೆಗ್-ಸ್ಪಿನ್ ದಂತಕತೆ ಶೇನ್ ವಾರ್ನ್ ಸಹಿತ ವಿಶ್ವ ಕ್ರಿಕೆಟ್‌ನ ಖ್ಯಾತನಾಮರು, ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಕೂಡ ತಮ್ಮ ಅಭಿಪ್ರಾಯ-ಅನಿಸಿಕೆಗಳನ್ನು ಪತ್ರಕರ್ತರು, ಲೇಖಕರು ಹಾಗೂ ಖ್ಯಾತ ಫೋಟೊಗ್ರಾಫರ್‌ಗಳು ಸಹಿತ ಇತರರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಕೊಹ್ಲಿ ಹಾಗೂ ‘ದಿ ಹಿಂದೂ’ ಪತ್ರಿಕೆಯ ಹಿರಿಯ ಕ್ರಿಕೆಟ್ ಲೇಖಕ ವಿಜಯ್ ಲೋಕಪಲ್ಲಿ ನಡುವೆ ನಡೆಯುವ ವಿಚಾರ ವಿನಿಮಯ ಕಾರ್ಯಕ್ರಮ ಸಾಹಿತ್ಯ ಹಬ್ಬದ ಮುಖ್ಯಾಂಶವಾಗಿದೆ. ದೀಪಾ ಕರ್ಮಾಕರ್ ಹಾಗೂ ಅವರ ಕೋಚ್ ಬಿಶ್ವೇಶ್ವರ ನಂದಿ ತಮ್ಮ ಕ್ರೀಡಾಜೀವನದ ಬಗ್ಗೆ ಮಾತನಾಡಲಿದ್ದಾರೆ.
ಕಾರ್ಯಕ್ರಮವನ್ನು ಇನ್‌ಸೈಟ್ ಸ್ಪೋರ್ಟ್ಸ್ ಆಯೋಜಿಸುತ್ತಿದೆ.
Next Story





