ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ
ರಾಯ್‌ಪುರ, ಫೆ.14: ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಛತ್ತೀಸ್‌ಗಢ ಸಶಸ್ತ್ರ ದಳದ (ಸಿಎಎಫ್) ಯೋಧನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಿಎಎಫ್‌ನ 9ನೇ ಬೆಟಾಲಿಯನ್‌ಗೆ ಸೇರಿದ ರಾಮ್‌ಜಿ ರಾಮ್‌ನೇತಮ್ (28) ಎಂಬಾತ ತನ್ನ ಸೇನಾ ಶಿಬಿರದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ವೇಳೆ ಗುಂಡಿನ ಸದ್ದು ಕೇಳಿದ ಇತರ ಯೋಧರು ಸ್ಥಳಕ್ಕೆ ಧಾವಿಸಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಮ್‌ಜಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಎಸ್ಪಿ ಸಂಜಯ್ ಧ್ರುವ ತಿಳಿಸಿದ್ದಾರೆ.
Next Story





