ಆಕಾಶದಲ್ಲಿ ಲೋಹದ ಹಕ್ಕಿಗಳ ಕಾರುಬಾರು..!
ಬೆಂಗಳೂರಿನ ಯಲಹಂಕದ ವಾಯು ನೆಲೆಯಲ್ಲಿ ಐದು ದಿನಗಳ ಕಾಲ 11ನೆ ಆವೃತ್ತಿಯ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಆರಂಭಗೊಂಡಿದೆ. ವೈಮಾನಿಕ ಪ್ರದರ್ಶನದಲ್ಲಿ ದೇಶಿ ನಿರ್ಮಿತ ಹಾಗೂ ವಿದೇಶಿ ವಿಮಾನಗಳು ಆಕರ್ಷಣೀಯ ಕೇಂದ್ರಬಿಂದುವಾಗಿವೆ. ದೇಶಿಯ ಸೂರ್ಯಕಿರಣ್ ಯುದ್ಧ ವಿಮಾನಗಳು, ತೇಜಸ್, ಸಾರಂಗ್, ಸ್ವೀಡನ್‌ನ ಸ್ಕಾಂಡಿನೇವಿಯನ್, ಇಂಗ್ಲೆಂಡ್‌ನ ಯಾಕೋವ್ಲೇವ್ ಹಾಗೂ ರಫೇಲ್ ಸೇರಿ ವಿವಿಧ ರೀತಿಯ ಯುದ್ಧವಿಮಾನಗಳು ಪ್ರಮುಖ ಆಕರ್ಷಣೆಯಾಗಿವೆ. ಇಸ್ರೇಲ್, ಫ್ರಾನ್ಸ್, ಜರ್ಮನಿ, ಜಪಾನ್, ಜರ್ಮನಿ, ದಕ್ಷಿಣ ಆಫ್ರಿಕಾ, ಅಮೆರಿಕಾ ಸೇರಿ 109 ರಾಷ್ಟ್ರಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಈ ಬಾರಿ ವೈಮಾನಿಕ ಪ್ರದರ್ಶನದ ಇತಿಹಾಸದಲ್ಲೇ ಪ್ರಥಮ ಬಾರಿಗೆ ನೆರೆ ರಾಷ್ಟ್ರ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಏರ್‌ಫೋರ್ಸ್‌ನ ಐವರು ಅಧಿಕಾರಿಗಳ ತಂಡ ಭಾಗವಹಿಸಿರುವುದು ವಿಶೇಷವಾಗಿದೆ.
Next Story





