ಲಘು ವಾಹನ ಚಾಲನ ತರಬೇತಿಗೆ ಅರ್ಜಿ ಆಹ್ವಾನ
ಉಡುಪಿ, ಫೆ.14: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಕ್ಕೆ ಸೇರಿದ ಸವಿತಾ, ಕುಂಬಾರ, ಮಡಿವಾಳ, ಜೋಗಿ ಮತ್ತು ಗೊಲ್ಲ ಸಮುದಾಯಗಳ ನಿರುದ್ಯೋಗಿ ಯುವಕ-ಯುವತಿಯರಿಗೆ, ಲಘು ವಾಹನ ಚಾಲನಾ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅರ್ಹರು ಬಿಳಿ ಹಾಳೆಯಲ್ಲಿ ಅರ್ಜಿಯನ್ನು, ಜಾತಿ, ಆದಾಯ ಪ್ರಮಾಣಪತ್ರ, ರೇಶನ್ ಕಾರ್ಡ್/ಆಧಾರ್‌ಕಾರ್ಡ್ 2 ಪೋಟೊದೊಂದಿಗೆ ಫೆ.28ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರಜತ್ರಾದಿ ‘ಬಿ’ ಬ್ಲಾಕ್ 2ನೆ ಮಹಡಿ, ಮಣಿಪಾಲ,ಉಡುಪಿ ತಾಲೂಕು ಇಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ (ದೂ:0820-2574882)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





