ತಣ್ಣೀರುಪಂತ ಉಪಚುನಾವಣೆ: ಕಾಂಗ್ರೆಸ್ ಗೆ ಜಯ
ಬೆಳ್ತಂಗಡಿ, ಫೆ.15: ತಾಲೂಕಿನ ತಣ್ಣೀರುಪಂತ ಗ್ರಾಮ ಪಂಚಾಯತ್ ನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತಾಜುದ್ದೀನ್ ಜಯಗಳಿಸಿದ್ದಾರೆ.
ಇಬ್ಬರು ಬಂಡಾಯ ಅಭ್ಯರ್ಥಿಗಳ ಸವಾಲನ್ನು ಎದುರಿಸಿ 343 ಮತಗಳನ್ನು ಗಳಿಸಿ ತಾಜುದ್ದೀನ್ ಚುನಾಯಿತರಾಗಿದ್ದಾರೆ. ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಕೆ.ಎಸ್.ಅಬ್ದುಲ್ಲ ಹಾಗೂ ಅಬೂಬಕರ್ ಚುನಾವಣೆಯಲ್ಲಿ ತೀರಾ ಹಿನ್ನಡೆ ಕಂಡರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ದ್ವಿತೀಯ ಸ್ಥಾನಕೆ ತೃಪ್ತಿ ಪಡಬೇಕಾಯಿತು.
Next Story





