ಚಿನ್ನಮ್ಮ , ಇಳವರಸಿ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರು

ಹೊಸದಿಲ್ಲಿ, ಫೆ.15: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಿಂದ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ವಿಶೇಷ ನ್ಯಾಯಾಲಯಕ್ಕೆ ಶರಣಾದರು.
ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ವಿ.ಕೆ.ಶಶಿಕಲಾ ನಟರಾಜನ್, ಸಂಬಂಧಿಕರಾದ ಜೆ. ಇಳವರಸಿ ಅವರು ನ್ಯಾ.ಅಶ್ವತ್ಥ್ ನಾರಾಯಣ್ ಅವರ ಮುಂದೆ ಹಾಜರಾದರು.
ವಿ.ಕೆ.ಶಶಿಕಲಾ ನಟರಾಜನ್ ಅವರು ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ, ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಶರಣಾಗಲು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.
ಶಶಿಕಲಾ ಪರ ವಕೀಲ ಕೆಟಿಎಸ್ ತುಳಸಿ ಅವರು ಶಶಿಕಲಾ ಅವರಿಗೆ ಶರಣಾಗಲು ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿನಾಕಿಚಂದ್ರ ಘೋಷ್ ಅವರು ಕಾಲಾವಕಾಶದ ಅರ್ಜಿಯನ್ನು ತಿರಸ್ಕರಿಸಿ ವಿಶೇಷ ನ್ಯಾಯಾಲಯಕ್ಕೆ ತಕ್ಷಣ ಶರಣಾಗಲು ಆದೇಶ ನೀಡಿದ್ದರು..
ವಿ.ಕೆ.ಶಶಿಕಲಾ ನಟರಾಜನ್ ಮಧ್ಯಾಹ್ನ ಚೆನ್ನೈನ ಪೋಯಸ್ ಗಾರ್ಡನ್ ನಿವಾಸದಿಂದ ಹೊರಟು ಮರೀನಾ ಬೀಚ್‌ನಲ್ಲಿರುವ ಜಯಲಲಿತಾ ಸಮಾಧಿ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ಬಳಿಕ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಆಗಮಿಸಿದ್ದಾರೆ.
ಹಿಂದೆ ಸಿವಿಲ್ ಕೋರ್ಟ್ ಆವರಣದಲ್ಲಿ ವಿಶೇಷ ನ್ಯಾಯಾಲಯವನ್ನು ಭದ್ರತೆಯ ಕಾರಣಕ್ಕಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲು ಆವರಣಕ್ಕೆ ಸ್ಥಳಾಂತರಿಸಲಾಗಿತ್ತು.
#VKSasikala now at Bengaluru jail to surrender
— NDTV (@ndtv) February 15, 2017
LIVE coverage here: https://t.co/hMlRpgrUU6 pic.twitter.com/ZWTVi66gST







