ಮಹಿಳೆಗೆ ಹಲ್ಲೆ : ಇಬ್ಬರ ವಿರುದ್ದ ಪ್ರಕರಣ ದಾಖಲು
ಪುತ್ತೂರು,ಫೆ.15; ಮಹಿಳೆಯೋರ್ವರಿಗೆ ಅಡಿಕೆ ಮರದ ಸಲಾಕೆಯಿಂದ ಹಲ್ಲೆ ನಡೆಸಿದ ಘಟನೆ ಒಳಮೊಗರು ಗ್ರಾಮದ ಮುರುವ ಎಂಬಲ್ಲಿ ನಡೆದಿದ್ದು, ಹಲ್ಲೆಯಿಂದ ಗಾಯಗೊಂಡಿರುವ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು , ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಮುರುವ ನಿವಾಸಿ ಇಬ್ರಾಹಿಂ ಎಂಬವರ ಪತ್ನಿ ಜುಬೈದಾ ಎಂಬವರು ಹಲ್ಲೆಗೊಳಗಾದ ಮಹಿಳೆ. ತಾನು ಮನೆಯಲ್ಲಿದ್ದ ವೇಳೆ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿದ ಸ್ಥಳೀಯ ನಿವಾಸಿ ಸಿದ್ದಿಕ್ ಎಂಬಾತ ಮನೆಯ ಅಂಗಳದಲ್ಲಿದ್ದ ಅಡಿಕೆ ಮರದ ಸಲಾಕೆಯನ್ನು ತೆಗೆದು ಅದರಲ್ಲಿ ಮಹಿಳೆಗೆ ಹಲ್ಲೆ ನಡೆಸಿದ್ದು, ಸ್ಥಳೀಯರಾದ ಹಸನ್ ಮದನಿ ಎಂಬವರ ಪತ್ನಿ ಅವ್ವಾಬಿ ಎಂಬಾಕೆ ಆತನಿಗೆ ಬೆಂಬಲ ನೀಡಿರುವುದಾಗಿ ಆರೋಪಿಸಿ ಜುಬೈದಾ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳಾದ ಸಿದ್ದಿಕ್ ಮತ್ತು ಅವ್ವಾಬಿ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Next Story





