ಸೇನಾ ಕಾರ್ಯಾಚರಣೆಗಳಿಗೆ ಅಡ್ಡಿಪಡಿಸುವವರಿಗೆ ಬಿಪಿನ್ ರಾವತ್ ಎಚ್ಚರಿಕೆ

ಹೊಸದಿಲ್ಲಿ,ಫೆ.15: ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗಗಳಲ್ಲಿ ಯೋಧರ ಹತ್ಯೆಗಳ ಬಗ್ಗೆ ಕಳವಳಗೊಂಡಿರುವ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಸೇನೆಯ ಶೋಧ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿರುವವರ ವಿರುದ್ಧ ಬುಧವಾರ ತೀವ್ರ ದಾಳಿ ನಡೆಸಿದರು.
ಮಂಗಳವಾರ ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಕಾಳಗಗಳಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳಿಗೆ ಇಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಎನ್‌ಕೌಂಟರ್‌ಗಳ ಸಂದರ್ಭ ನಮ್ಮ ಕಾರ್ಯಾಚರಣೆ ಗಳಿಗೆ ಅಡ್ಡಿಪಡಿಸುವವರನ್ನು ಭಯೋತ್ಪಾದಕರ ಸಹಾಯಕರೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉತ್ತರ ಕಾಶ್ಮೀರದ ಹಜಿನ್ ಮತ್ತು ಕ್ರಾಲಗುಂದ ಹಂದ್ವಾರಾದಲ್ಲಿ ನಿನ್ನೆ ನಡೆದ ಎರಡು ಪ್ರತ್ಯೇಕ ಎನಕೌಂಟರ್‌ಗಳಲ್ಲಿ ನಾಲ್ವರು ಸೇನಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು. ನಾಲ್ವರು ಭಯೋತ್ಪಾದಕರೂ ಕೊಲ್ಲಲ್ಪಟ್ಟಿದ್ದರು.
ಕ್ರಾಲಗುಂದ್‌ನಲ್ಲಿ ಮೇ.ಎಸ್.ದಹಿಯಾ ಸಾವನ್ನಪ್ಪಿದ್ದರೆ, ಹಿಜಿನ್‌ನಲ್ಲಿ ಗಸ್ತುಸಿಬ್ಬಂದಿ ಉತ್ತರಾಖಂಡದ ನೈನಿತಾಲ್‌ನ ಧರ್ಮೇಂದ್ರ ಕುಮಾರ, ಜಮ್ಮು-ಕಾಶ್ಮೀರದ ಸಾಂಬಾ ನಿವಾಸಿ ರೈಫಲ್‌ಮನ್ ರವಿಕುಮಾರ ಮತ್ತು ಉ.ಪ್ರದೇಶದ ಜಾನಪುರ ನಿವಾಸಿ ಗ್ರೆನೇಡಿಯರ್ ಅಶುತೋಷ ಕುಮಾರ್ ಮೃತಪಟ್ಟಿದ್ದರು.







