ಉಡುಪಿ ಮೆಸ್ಕಾಂಗೆ ತೃತೀಯ ಪ್ರಶಸ್ತಿ

ಉಡುಪಿ, ಫೆ.15: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ 2015 -16ನೆ ಸಾಲಿನಲ್ಲಿ ಉಡುಪಿ ಕಾರ್ಯ ಮತ್ತು ಪಾಲನಾ ವೃತ್ತ ವ್ಯಾಪ್ತಿಯ ಸಮಗ್ರ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಉಡುಪಿ ಉಪವಿಭಾಗದ ಎಲ್ಲ ಮುಖ್ಯಪ್ರಬಂಧಕರುಗಳಿಗೆ ಉಡುಪಿಯ ಲಯನ್ಸ್ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ತೃತೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೆಸ್ಕಾಂನ ಕಾರ್ಯ ನಿರ್ವಾಹಕ ಇಂಜಿನಿಯರ್‌ಗಳಾದ ಶರತ್‌ಚಂದ್ರ ಪಾಲ್, ಉಪ ಲೆಕ್ಕ ನಿಯಂತ್ರಣಾಧಿಕಾರಿ ಮಂಜುನಾಥ್, ಕಾರ್ಯನಿರ್ವಾ ಹಕ ಇಂಜಿನಿಯರ್ ದಿನೇಶ್ ಉಪಾಧ್ಯಾಯ, ಲೆಕ್ಕಾಧಿಕಾರಿ ದಿನೇಶ್ ಉಪ್ಪೂರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಣರಾಜ್ ಭಟ್, ಸಹಾಯಕ ಇಂಜಿನಿಯರ್ ಮಾರ್ತಾಂಡಪ್ಪಸಭೆಯಲ್ಲಿ ಉಪಸ್ಥಿತರಿ ದ್ದರು.
ಉನ್ನತಿ ಪದವಿಗೆ ಬಡ್ತಿ ಹೊಂದಿದ ಸಹಾಯಕ ಇಂಜಿನಿಯರ್ ಮಾರ್ತಾಂಡಪ್ಪಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಮೆಸ್ಕಾಂನ ಉಡುಪಿ, ಪುತ್ತೂರು, ಉದ್ಯಾವರ, ಮಣಿಪಾಲ ವಿಭಾಗದ ಮೆಸ್ಕಾಂನ ಅಧಿಕಾರಿಗು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
Next Story





