ದ.ಕ.ಜಿಪಂಗೆ ಛತ್ತೀಸ್‌ಘಡ್ ನಿಯೋಗ ಭೇಟಿ

ಮಂಗಳೂರು, ಫೆ.15:ಛತ್ತೀಸ್ ಘಡ್ ರಾಜ್ಯದ ಬಿಜಾಪುರ ಜಿಪಂ ಸದಸ್ಯರ ನಿಯೋಗವು ಬುಧವಾರ ಮಂಗಳೂರಿನಲ್ಲಿ ದ.ಕ. ಜಿಪಂ ಕಚೇರಿಗೆ ಭೇಟಿ ನೀಡಿತು.
ಬಿಜಾಪುರ ಜಿಪಂ ಅಧ್ಯಕ್ಷೆ ಜಮುನಾ ಸಖಾನಿ ನೇತೃತ್ವದ ನಿಯೋಗವು ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ನರೇಗಾ ಕಾಮಗಾರಿ, ತ್ಯಾಜ್ಯ ವಿಲೇವಾರಿ ಘಟಕ ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿತು. ವಿವಿಧ ಯೋಜನೆಗಳ ಬಗ್ಗೆ ಜಿಪಂ ಸಿಇಒ ಡಾ.ಎಂ.ಆರ್. ರವಿ ನಿಯೋಗಕ್ಕೆ ಮಾಹಿತಿ ನೀಡಿದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಎಂ.ಎಸ್. ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
Next Story





