ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ

ಮಂಗಳೂರು, ಫೆ.15: ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ರಮಾನಾಥ ರೈಯ ಅಧ್ಯಕ್ಷತೆಯಲ್ಲಿ ಬುಧವಾರ ಜರಗಿ ಜಿಲ್ಲಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಪ್ರಗತಿ, ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರ ಆಯ್ಕೆ, ವಿಧಾನಸಭಾ ಚುನಾವಣೆಗೆ ಸಿದ್ಧತೆ, ಬಡವರ, ಅಲ್ಪಸಂಖ್ಯಾತ, ದಲಿತ ವರ್ಗ ಹಾಗೂ ಹಿಂದುಳಿದ ವರ್ಗದ ಅಭಿವೃದ್ಧಿಗೆ ರಾಜ್ಯ ಸರಕಾರವು ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಚರ್ಚಿಸಿ ಬ್ಲಾಕ್ ಅಧ್ಯಕ್ಷರು ಮತ್ತು ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳ ಸಲಹೆ ಸೂಚನೆಯನ್ನು ಪಡೆಯಲಾಯಿತು.
ಕೇಂದ್ರ ಸರಕಾರದ ವೈಫಲ್ಯ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ, ಅಂಬಾನಿ, ಅದಾನಿ ಮತ್ತು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರ ಸಲಹೆ ಪಡೆದು ಜನಸಾಮಾನ್ಯರಿಗೆ ಅನ್ಯಾಯ ಮಾಡಿದುದರ ವಿರುದ್ಧ ಜನತೆ ಸೂಕ್ತ ಉತ್ತರ ಕೊಡಬೇಕು ಎಂದು ಬಿ.ರಮಾನಾಥ ರೈ ಕರೆ ನೀಡಿದರು.
ಉಳ್ಳಾಲ ನಗರಸಭೆಯ ಉಪಚುನಾವಣೆಯಲ್ಲಿ 2 ಸ್ಥಾನ ಹಾಗು ಪುತ್ತೂರು ನಗರಸಭೆಯಲ್ಲಿ ಆರು ವಾರ್ಡ್‌ಗಳಲ್ಲಿ 3 ವಾರ್ಡ್‌ಗಳಲ್ಲ್ಲಿ ಗೆದ್ದ ಹಾಗು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು, ನಾಯಕರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ಫೆ.28ರೊಳಗೆ ಎಲ್ಲ ಬ್ಲಾಕ್ ಅಧ್ಯಕ್ಷರುಗಳು ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಡಿಸಿಸಿ ಕಚೇರಿಗೆ ಸಲ್ಲಿಸಲು ಸೂಚಿಸಿದರು.
ಎಐಸಿಸಿ, ಸದಸ್ಯ ಪಿ.ವಿ.ಮೋಹನ್, ಬ್ಲಾಕ್ ಅಧ್ಯಕ್ಷರಾದ ವೆಂಕಪ್ಪಗೌಡ, ಸಂತೋಷ್ ಕುಮಾರ್ ಶೆಟ್ಟಿ, ಆರ್.ಕೆ ಪೃಥ್ವಿರಾಜ್,ವಿಶ್ವಾಸ್ ಕುಮಾರ್ ದಾಸ್, ವೆಲೆರೀಯನ್ ಡಿಸೋಜ, ಪಕ್ಷದ ಮುಖಂಡರಾದ ಅಶ್ರಫ್ ಎಚ್.ಎಮ್, ಮಿಥುನ್ ರೈ, ಮುಹಮ್ಮದ್ ಕುಂಜತ್ತ್‌ಬೈಲ್, ಮುಹಮ್ಮದ್ ಮುಕ್ಕಚೇರಿ, ಮುಹಮ್ಮದ್ ಅಲಿ ಕೂಳೂರು ಸಂಘಟನೆಯ ಬಗ್ಗೆ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಮೇಯರ್ ಹರಿನಾಥ್, ಮುಡಾ ಅಧ್ಯಕ್ಷ ಸುರೇಶ್ ಬಳ್ಳಾಲ್,ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಪಕ್ಷದ ಮುಖಂಡರಾದ ಕಣಚೂರು ಮೋನು, ಪ್ರವೀಣ್ ಚಂದ್ರ ಆಳ್ವ, ಚಂದ್ರಹಾಸ ಕರ್ಕೇರ, ರಾಮಚಂದ್ರ ಗೌಡ, ಹರೀಶ್ ಕುಮಾರ್, ಅಬ್ಬಾಸ್ ಅಲಿ, ಬಾಲಕೃಷ್ಣ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ಹಿಲ್ಡಾ ಆಳ್ವ, ಜೆಸಿಂತಾ ಆಲ್ಫೇಡ್, ಮಮತಾಗಟ್ಟಿ, ಪ್ರಕಾಶ್ ಶೆಟ್ಟಿ ತುಂಬೆ, ಅನೀತಾ ಹೇಮನಾಥ ಶೆಟ್ಟಿ, ಶಾಲೆಟ್ ಪಿಂಟೊ, ಹರ್ಷರಾಜ್ ಮುದ್ಯ, ಬಲರಾಜ್ ರೈ, ಸಂತೋಷ್ ಶೆಟ್ಟಿ, ಟಿ.ಕೆ. ಸುಧೀರ್, ಎಸ್. ಅಬ್ಬಾಸ್, ಆಶಿತ್ ಪಿರೇರಾ, ಬ್ಯಾರಿ ಅಕಾಡಮಿ ಅಧ್ಯಕ್ಷ ಮುಹಮ್ಮದ್ ಹನೀಫ್, ಸ್ಟಾನಿ ಅಲ್ವಾರೀಸ್, ವಿಟ್ಲ ಅಬ್ದುಲ್ ಖಾದರ್, ಮಹಾಬಲ ಮಾರ್ಲ, ಅಬ್ದುರ್ರವೂಫ್, ಅಶೋಕ್ ಡಿ.ಕೆ., ನವೀನ್ ಡಿಸೋಜ, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಲತೀಫ್, ಹೇಮಾನಾಥ ಶೆಟ್ಟಿ, ಕೇಶವ ಮರೋಳಿ, ರಜನೀಶ್ ಕಾಪಿಕಾಡ್, ಸುಹೈಲ್ ಕಂದಕ್, ಲ್ಯಾನ್ಸಿ ಲಾಟ್ ಪಿಂಟೋ, ಡಾ. ರಘು, ಪದ್ಮನಾಭ ನರಿಂಗಾನ, ಬಿ.ಕೆ. ಇದಿನಬ್ಬ, ಲೋಕೇಶ್ ಹೆಗ್ಡೆ, ಉಮಾನಾಥ ಶೆಟ್ಟಿ, ಜಯಕುಮಾರ್ ಸೊರಕೆ, ಬಿಲಾಲ್ ಮೊಯ್ದಿನ್, ಪದ್ಮನಾಭ ಅಮೀನ್, ಆಸಿಫ್ ಮುಲ್ಕಿ, ಪ್ರಕಾಶ್ ಅಳಪೆ, ಉಮರ್ ಪಜೀರ್, ನಮೀತಾ ಡಿ ರಾವ್, ಗ್ರೆಟ್ಟಾ ರೆಬೆಲೊ, ನಝೀರ್ ಬಜಾಲ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ಮನಪಾ ಮುಖ್ಯಸಚೆೀತಕ ಶಶಿಧರ ಹೆಗ್ಡೆ ವಂದಿಸಿದರು.
ಸಭೆಯ ನಿರ್ಣಯ
ಯೋಜನಾ ಸಮಿತಿಗೆ ಸದಸ್ಯರ ಆಯ್ಕೆ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್ ಮತ್ತು ಪಿ.ಪಿ ವರ್ಗೀಸ್‌ರಿಗೆ ನೀಡಲು ಮತ್ತು ಸಂಘ ಪರಿವಾರದ ಸುಳ್ಳು ಆಪಾದನೆಗಳಿಗೆ ಪಕ್ಷದ ನಾಯಕರು, ಕಾರ್ಯಕರ್ತರು ಒಗ್ಗೂಡಿ ಸೂಕ್ತ ಉತ್ತರಗಳನ್ನು ನೀಡಲು ಹಾಗು ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರ ಹಿರಿತನವನ್ನು ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಲು ನಿರ್ಧರಿಸಲಾಯಿತು.







