ಬೆಳ್ತಂಗಡಿ : ಉಪಚುನಾವಣೆ ಕಾಂಗ್ರೆಸ್‌ಗೆ ಗೆಲುವು

ಬೆಳ್ತಂಗಡಿ,ಫೆ.15: ತಾಲೂಕಿನ ತಣ್ಣೀರು ಪಂತ ಗ್ರಾಮ ಪಂಚಾಯತಿನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವನ್ನು ಪಡೆದಿದ್ದಾರೆ.
ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಥಿಸಿದ್ದ ತಾಜುದ್ದೀನ್ ಅವರು 343 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಥಿ ಬಿಜೆಪಿ ಬೆಂಬಲಿತ ರವಿಶಂಕರ್ (265ಮತ) ಅವರನ್ನು ಸೋಲಿಸಿದರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ,ಎಸ್ ಅಬ್ದುಲ್ಲ ಅವರಿಗೆ 113 ಮತಗಳು ಹಾಗೂ ಅಬೂಬಕ್ಕರ್ ಅವರಿಗೆ 128 ಮತಗಳು ಮಾತ್ರ ದೊರೆತಿದೆ ಬುಧವಾರ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಿತು.
Next Story





