ಲಾರಿ ಚಾಲಕ ನೇಣು ಬಿಗಿದು ಆತ್ಮಹತ್ಯೆ
ಮೈಸೂರು, ಫೆ.15: ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಲಾರಿ ಚಾಲಕ ಕಬ್ಬು ತುಂಬಿದ್ದ ಲಾರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ವಿದ್ಯಾನಗರ ನಿವಾಸಿ ಮಾದೇಶ (34) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಬ್ಬು ತುಂಬಿದ್ದ ಲಾರಿಯನ್ನು ನಂಜನಗೂಡು ರಸ್ತೆಯ ಕಡಕೂಳ ಬಳಿ ನಿಲ್ಲಿಸಿ ಅಲ್ಲಿಯೇ ಮಾದೇಶ ನೇಣಿಗೆ ಶರಣಾಗಿದ್ದಾನೆ. ಕಬ್ಬು ತುಂಬಿದ ಲಾರಿ ಕೆಟ್ಟು ನಿಂತಿರಬೇಕೆಂದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಇದನ್ನು ಗಮನಿಸದೇ ತೆರಳಿದ್ದಾರೆ.
ಆದರೆ, ತುಂಬ ಸಮಯ ಒಂದೇ ಕಡೆ ನಿಂತಿರುವುದಕ್ಕೆ ಅನುಮಾನಗೊಂಡು ಗ್ರಾಮಸ್ಥರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸ್ಥಳಕ್ಕೆ ಮೈಸೂರು ಸೌಥ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
Next Story





