ನಾಳೆಯಿಂದ ‘ಮುರಾರಿ -ಕೆದ್ಲಾಯ ರಂಗೋತ್ಸವ’
ಉಡುಪಿ, ಫೆ.15: ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಡಾ.ನಿ. ಮುರಾರಿ ಬಲ್ಲಾಳ್, ಪ್ರೊ.ಕೆ.ಎಸ್.ಕೆದ್ಲಾಯ ನೆನಪಿನ ‘ಮುರಾರಿ-ಕೆದ್ಲಾಯ ರಂಗೋತ್ಸವ’ವನ್ನು ೆ.17ರಿಂದ 19ರವರೆಗೆ ಪ್ರತಿದಿನ ಸಂಜೆ 6:15ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ.
17ರಂದು ರಂಗೋತ್ಸವವನ್ನು ನಟ ಮಂಡ್ಯ ರಮೇಶ್ ಉದ್ಘಾಟಿಸಲಿರುವರು. ಬಳಿಕ ನಟನ ಮೈಸೂರು ತಂಡದಿಂದ ‘ಬಹುಮುಖಿ’(ನಿರ್ದೇಶನ-ಮೇಘ ಸಮೀರ, ರಚನೆ-ವಿವೇಕ್ ಶ್ಯಾನುಭಾಗ್) ನಾಟಕ ಪ್ರದರ್ಶನಗೊಳ್ಳಲಿದೆ. ೆ.18ರಂದು ಗೋಪಾಲಕೃಷ್ಣ ಅಡಿಗರ ಶತಮಾನೋತ್ಸವ ನಾಂದಿ ಕಾರ್ಯಕ್ರಮದ ಪ್ರಯುಕ್ತ ಭಾವಗೀತೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಕಿನ್ನರ ಮೇಳ ತುಮರಿ ತಂಡದ ಷೇಕ್ಸ್‌ಪಿಯರ್‌ನ ‘ಕೊರಿಯೋಲೇನಸ್’(ಅನುವಾದ- ಕ.ವೆಂ.ರಾಜಗೋಪಾಲ, ನಿ-ಡಾ.ಸಾಮ್‌ಕುಟ್ಟಿ ಪಟ್ಟಾಂಕರಿ) ನಾಟಕ ಪ್ರದರ್ಶನ ನಡೆಯಲಿದೆ.
19ರಂದು ಸಮಾರೋಪ ಸಮಾರಂಭದಲ್ಲಿ ಹೆಗ್ಗೋಡು ನೀನಾಸಂನ ಅಕ್ಷರ ಕೆ.ವಿ. ಸಮಾರೋಪ ಭಾಷಣ ಮಾಡಲಿರುವರು. ಬಳಿಕ ನೀನಾಸಂ ಹೆಗ್ಗೋಡು ತಂಡದ ‘ಮಾಲತಿ ಮಾಧವ’(ಕನ್ನಡ ರೂಪ ಮತ್ತು ನಿರ್ದೇಶನ- ಅಕ್ಷರ ಕೆ.ವಿ.) ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವೇದಿಕೆ ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





