ರಕ್ಷಿತಾರಣ್ಯದಲ್ಲಿ ವಿಶಿಷ್ಟ ಪ್ರಾಚೀನ ಶಿಲೆಗಳು ಪತ್ತೆ
-(1).gif)
ಕಾಸರಗೋಡು, ಫೆ.16: ಬಳಾಲ್ನ ರಕ್ಷಿತಾರಣ್ಯದಲ್ಲಿ ವಿಶಿಷ್ಟ ಪ್ರಾಚೀನ ಶಿಲೆಗಳು ಪತ್ತೆಯಾಗಿದ್ದು, ಗಮನ ಸೆಳೆಯುತ್ತಿದೆ.
ಈ ಶಿಲೆಗಳನ್ನು ಹಿಂದಿನ ಕಾಲದಲ್ಲಿ ಬುಡಕಟ್ಟು ಜನಾಂಗದ ಮುಖ್ಯಸ್ಥರು ಆಸನಕ್ಕಾಗಿ ಬಳಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಧರ್ಮಾಧಾರಿತ ಕೆಲ ಆಚರಣೆಗೂ ಈ ಶಿಲೆಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ.
ಬಳಾಲ್ನ ಮಾರ್ದೋಮ್ ಎಂಬಲ್ಲಿನ ರಕ್ಷಿತಾರಣ್ಯದಲ್ಲಿ ಈ ಶಿಲೆಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ರಕ್ಷಿತಾರಣ್ಯದಿಂದ ಆನೆಗಳು ನಾಡಿಗಿಳಿಯುತ್ತಿರುವ ಹಿನ್ನಲೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಅರಣ್ಯದಲ್ಲಿ ಅಗೆಯುತ್ತಿದ್ದಾಗ ಈ ಶಿಲೆಗಳು ಪತ್ತೆಯಾಗಿವೆ.
ಮೂರು ವರ್ಷಗಳ ಹಿಂದೆ ಇದೆ ರಕ್ಷಿತಾರಣ್ಯದ ಇನ್ನೊಂದು ಬದಿಯಲ್ಲಿ ಇಂತಹ ಶಿಲೆಗಳು ಪತ್ತೆಯಾಗಿದ್ದವು. ಅಂದು ಪತ್ತೆಯಾದ ಶಿಲಾ ಕಲ್ಲುಗಳ ಬಗ್ಗೆ ಕೇರಳ ಆರ್ಕಿಯಾಲಾಜಿಕಲ್ ಇಲಾಖೆಗೆ ಮಾಹಿತಿ ನೀಡಿದ್ದರೂ ಈ ಬಗ್ಗೆ ಇದುವರೆಗೂ ಯಾವುದೇ ರೀತಿಯ ಅಧ್ಯಯನ ನಡೆಸಿಲ್ಲ. ಈಗ ಪತ್ತೆಯಾಗಿರುವ ಶಿಲೆಗಳ ಬಗ್ಗೆ ಆರ್ಕಿಯಾಲಿಜಿಕಲ್ ಸರ್ವೇ ಆಫ್ ಇಂಡಿಯಾಗೆ ಮಾತ್ತು ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾಗೆ ಮಾಹಿತಿ ನೀಡಲಾಗಿದೆ.





