ಮೋದಿ ಮತ್ತು ಅಖಿಲೇಶ್ ಒಂದೇ ನಾಣ್ಯದ ಎರಡು ಮುಖಗಳು: ಉವೈಸಿ

ಕಾನ್‌ಪುರ,ಫೆ. 16: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಬ್ಬರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಬುಧವಾರ ರಾತ್ರಿ ಚುನಾವಣಾ ಸಭೆಯೊಂದರಲ್ಲಿ ಎಐಎಂಐಎಂನ ಅಧ್ಯಕ್ಷ ಅಸದುದ್ದೀನ್ ಉವೈಸಿ ಹೇಳಿದರು.ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ದಂಗೆ ನಡೆದಿತ್ತು. ಅವರು ಅದನ್ನು ತಡೆಯಲಿಲ್ಲ. ಅಖಿಲೇಶ್ ಮುಝಫ್ಫರ್ ನಗರ್‌ನಲ್ಲಿ ದಂಗೆ ನಡೆದಾಗ ಅಖಿಲೇಶ್ ಮುಖ್ಯಮಂತ್ರಿ ಯಾಗಿದ್ದರೂ ಅವರು ದಂಗೆಯನ್ನು ತಡೆಯಲಿಲ್ಲ ಹೀಗಿರುವಾಗ ಇವರಿಬ್ಬರ ನಡುವೆ ಎಂತಹ ವ್ಯತ್ಯಾಸವಿದೆ ಎಂದು ಉವೈಸಿ ಪ್ರಶ್ನಿಸಿದ್ದಾರೆ.
ಅಖಿಲೇಶ್ ಬಿಜೆಪಿಯನ್ನು ತೋರಿಸಿ ಮುಸ್ಲಿಮರನ್ನು ಹೆದರಿಸಿ ವೋಟು ಪಡೆಯಲು ಯತ್ನಿಸುತ್ತಿದ್ದಾರೆ. ಕಾನ್‌ಪುರದ ಆರ್ಯನಗರದಲ್ಲಿ ಉವೈಸಿ ತನ್ನ ಪಕ್ಷದ ಉಮೇದುವಾರನ ಪರ ಪ್ರಚಾರ ನಡೆಸುತ್ತಿದ್ದರು. ಇದಕ್ಕಿಂತ ಮೊದಲು ತಾನು ಕಾನ್‌ಪುರಕ್ಕೆ ಬರಲು ಬಯಸಿದ್ದೆ ಆದರೆ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡಿಲ್ಲ ಎಂದು ಉವೈಸಿ ಹೇಳಿದರು. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಚುನಾವಣಾ ಆಯೋಗದ ಹೆದರಿಕೆಯಲ್ಲಿ ತನಗೆ ಇಲ್ಲಿಗೆ ಬರಲು ಅನುಮತಿಸಲಾಗಿದೆ ಎಂದು ಉವೈಸಿ ತಿಳಿಸಿದರು. ತಾನು ಉತ್ತರ ಪ್ರದೇಶದಲ್ಲಿ ಒಂದು ಡಝನ್‌ನಷ್ಟು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದೇನೆ. ಆದರೆ ತನ್ನ ಭಾಷಣದಿಂದ ಉತ್ತರಪ್ರದೇಶ ಎಲ್ಲಿಯೂ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾದ ಘಟನೆ ಸಂಭವಿಸಿಲ್ಲ ಎಂದು ಉವೈಸಿ ಹೇಳಿದರೆಂದು ವರದಿಯಾಗಿದೆ.







