ವಿಲಾಸಿ ಮದುವೆಗಳಿಗೆ ಕರಡಿ ಬಿಡಲು ಬರುತ್ತಿದ್ದಾರೆ ಹಾರ್ಲೆ ಡೇವಿಡ್ಸನ್ ಬಿಡುವ ಮಹಿಳಾ ಸಂಸದೆ !
ಏನು ಮಾಡಲಿದ್ದಾರೆ ಈಕೆ ?
.jpg)
ಹೊಸದಿಲ್ಲಿ,ಫೆ.14 : ಸಂಸತ್ತಿಗೆ ತಮ್ಮ ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ನಲ್ಲಿ ಬರುತ್ತಿರುವ ಹಾಗೂ ಇದೇ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿರುವ ಕಾಂಗ್ರೆಸ್ ಪಕ್ಷದ ಬಿಹಾರದ ಸುಪೌಲ್ ಕ್ಷೇತ್ರದ ಸಂಸದೆ ರಂಜಿತ್ ರಾಜನ್ ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ. ವಿಲಾಸಿ ಮದುವೆಗಳಿಗೆ ಕಡಿವಾಣ ಹಾಕುವ ಮಸೂದೆಯೊಂದನ್ನು ಅವರು ಲೋಕಸಭೆಯ ಮುಂದೆ ಮಂಡಿಸಿದ್ದಾರೆ.
ವಿವಾಹವೊಂದಕ್ಕೆ ಆಗಮಿಸುವ ಅತಿಥಿಗಳ ಸಂಖ್ಯೆ ಹಾಗೂ ಅಲ್ಲಿ ಅತಿಥಿ ಸತ್ಕಾರದ ಭಾಗವಾಗಿ ಅವರಿಗೆ ಉಣಬಡಿಸಲಾಗುವ ಭಕ್ಷ್ಯಗಳ ಸಂಖ್ಯೆಗೆ ಕಡಿವಾಣ ಹಾಕಲು ಈ ಮಸೂದೆ ಉದ್ದೇಶಿಸಿದೆಯಲ್ಲದೆ ತಮ್ಮ ಮಕ್ಕಳ ವಿವಾಹಕ್ಕಾಗಿ ರೂ 5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವವರು ಅದರ ಶೇ 10ರಷ್ಟು ಮೊತ್ತವನ್ನು ಬಡ ಹೆಣ್ಣು ಮಕ್ಕಳ ವಿವಾಹಕ್ಕೂ ಒದಗಿಸಬೇಕೆಂದು ಈ ಮಸೂದೆ ತಿಳಿಸುತ್ತದೆ.
ಸಂಸದ ಪಪ್ಪು ಯಾದವ್ ಅವರ ಪತ್ನಿಯಾಗಿರುವ ರಂಜಿತ್ ರಾಜನ್ ಅವರು ಮಂಡಿಸಿದ ದಿ ಮ್ಯಾರೇಜಸ್ (ಕಂಪಲ್ಸರಿ ರಿಜಿಸ್ಟ್ರೇಶನ್ ಎಂಡ್ ಪ್ರಿವೆನ್ಶನ್ ಆಫ್ ವೇಸ್ಟ್ ಫುಲ್ ಎಕ್ಸ್ ಪೆಂಡಿಚರ್ )ಬಿಲ್ 2016 ಇದನ್ನು ಮುಂದಿನ ಲೋಕಸಭಾ ಅಧಿವೇಶನದಲ್ಲಿ ಖಾಸಗಿ ಸದಸ್ಯರ ಮಸೂದೆಯೆಂದು ಪರಿಗಣಿಸಲ್ಪಟ್ಟು ಚರ್ಚೆಗೆ ಬರಲಿದೆ.
ವಿವಾಹಗಳನ್ನು ಸರಳವಾಗಿಸುವ ನಿಟ್ಟಿನಲ್ಲಿ ಈ ಮಸೂದೆ ಮಹತ್ವದ ಹೆಜ್ಜೆಯಾಗಬಹುದು, ಎಂದು ಹೇಳುವ ರಂಜೀತ್ ರಾಜನ್ ರೂ. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಮದುವೆಗೆ ವಿನಿಯೋಗಿಸುವವರು ಅದರ ಶೇ 10ರಷ್ಟನ್ನು ಸರಕಾರ ರಚಿಸುವ ಕಲ್ಯಾಣ ನಿಧಿಗೆ ಈ ಪ್ರಸ್ತಾವಿತ ಮಸೂದೆಯನ್ವಯ ನೀಡಬೇಕಾಗುತ್ತದೆ.
ಈ ಮಸೂದೆ ಜಾರಿಯಾಗಿದ್ದೇ ಆದಲ್ಲಿ ಎಲ್ಲಾ ವಿವಾಹಗಳು ನಡೆದ 60 ದಿನಗಳೊಳಗಾಗಿ ಅವುಗಳನ್ನು ನೋಂದಣಿಗೊಳಿಸಬೇಕಾಗುತ್ತದೆ ಹಾಗೂ ಸರಕಾರ ವಿವಾಹವೊಂದಕ್ಕೆ ಆಗಮಿಸುವ ಅತಿಥಿಗಳ ಸಂಖ್ಯೆ ಹಾಗೂ ಅಲ್ಲಿ ಅತಿಥಿಗಳಿಗೆ ನೀಡಲಾಗುವ ಭಕ್ಷ್ಯಗಳ ಸಂಖ್ಯೆಗೆ ಒಂದು ಮಿತಿಯನ್ನು ನಿಗದಿ ಪಡಿಸಬಹುದಾಗಿದೆ.







