ಸೆಕ್ಸ್ ಜಾಲ ನಡೆಸುತ್ತಿದ್ದ ಬಿಜೆಪಿ ಪದಾಧಿಕಾರಿಗಳ ಬಂಧನ
ಐಎಸ್ಐ ಏಜೆಂಟರು ಬಲೆಗೆ ಬಿದ್ದ ಬೆನ್ನಿಗೇ ಪಕ್ಷಕ್ಕೆ ಇನ್ನೊಂದು ಮುಖಭಂಗ

ಭೋಪಾಲ್, ಫೆ.16: ಮಧ್ಯ ಪ್ರದೇಶದ ಆಡಳಿತ ಪಕ್ಷವಾದ ಬಿಜೆಪಿಗೆ ಮುಖಭಂಗವಾಗುವ ಬೆಳವಣಿಗೆಯೊಂದರಲ್ಲಿ ಇತ್ತೀಚೆಗೆ ಅಲ್ಲಿನ ಉಗ್ರ ನಿಗ್ರಹ ಪಡೆ (ಎಟಿಎಸ್) ಪೊಲೀಸರು ಬೇಹುಗಾರಿಕಾ ಆರೋಪದಲ್ಲಿ ಬಂಧಿಸಲ್ಪಟ್ಟವರಲ್ಲಿ ಇಬ್ಬರಿಗೆ ಬಿಜೆಪಿ ಜತೆ ಬಲವಾಗಿ ನಂಟಿತ್ತು ಎಂದು ತಿಳಿದು ಬಂದಿದ್ದರೆ, ಇದೀಗ ಸೆಕ್ಸ್ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಬಿಜೆಪಿ ಪದಾಧಿಕಾರಿಯೊಬ್ಬನನ್ನು ಬಂಧಿಸಲಾಗಿದೆ.
ಇಂದೋರ್ ನಗರದಲ್ಲಿ ಯುವತಿಯೊಬ್ಬಳನ್ನು ವೇಶ್ಯಾವಾಟಿಕೆಗೆ ದೂಡಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ನಾಯಕ ರಜ್ಜಿ ರಂಧವ ಎಂಬವರನ್ನು ಶಿವಪುರಿ ಪೊಲೀಸರು ಬಂಧಿಸಿದ್ದಾರೆ.
ಇದು ಸಾಲದೆಂಬಂತೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದು, ಈ ಸಂಬಂಧ ಕೂಡ ಬಂಧಿಸಲ್ಪಟ್ಟವರಲ್ಲಿ ಕೆಲ ಬಿಜೆಪಿ ನಾಯಕರುಗಳ ಸಂಬಂಧಿಗಳು ಸೇರಿದ್ದಾರೆ.
ಇತ್ತೀಚೆಗೆ ಗೂಢಚಾರಿಕೆಗೆ ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ಮಧ್ಯಪ್ರದೇಶ ಎಟಿಎಸ್ ಬಂಧಿಸಿದ್ದಹನ್ನೊಂದು ಮಂದಿಯಲ್ಲಿಭೋಪಾಲದಿಂದ ಬಂಧಿಸಲ್ಪಟ್ಟಿದ್ದ ಧ್ರುವ್ ಸಕ್ಸೇನಾಬಿಜೆಪಿಯ ಐಟಿ ಸೆಲ್ ಪದಾಧಿಕಾರಿಯಾಗಿದ್ದನೆಂದು ಈಗಾಗಲೇ ವರದಿಯಾಗಿದ್ದರೆ, ಗ್ವಾಲಿಯರ್ ನಿಂದ ಬಂಧಿತನಾದ ಇನ್ನೊಬ್ಬ ಬಿಜೆಪಿ ಕಾರ್ಪೊರೇಟರ್ ಒಬ್ಬರ ಸಂಬಂಧಿ ಎಂದು ತಿಳಿದು ಬಂದಿತ್ತು.
ಇಲ್ಲಿ ಗಮನಿಸತಕ್ಕ ಅಂಶವೊಂದಿದೆ, ಶಾರುಖ್ ಖಾನ್ ಅವರ ರಯೀಸ್ ಚಿತ್ರ ಬಿಡುಗಡೆ ವೇಳೆ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿ ನಟನ ದೇಶ ಭಕ್ತಿಯನ್ನು ಪ್ರಶ್ನಿಸಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಘಿಯಾ ಅವರು ಧ್ರುವ್ ಸಕ್ಸೇನಾ ಜತೆ ನಿಂತಿರುವ ಹಲವು ಫೋಟೋಗಳೂ ಈಗ ಹೊರ ಬಂದಿವೆ.







