ಫೆ.25ರಂದು ಉದ್ಯೋಗ ಕೌಶಲ್ಯ ತರಬೇತಿ
ಮಂಗಳೂರು, ಫೆ.16: ಎಂ-ಪವರ್_ಅಸೋಸಿಯೇಷನ್ ಆಫ್ ಪೋಸ್ಟ್ ಗ್ರಾಜುವೇಟ್ ಮುಸ್ಲಿಮ್ಸ್ ಸಂಘಟನೆಯ ಆಶ್ರಯದಲ್ಲಿ ಒಂದು ದಿನದ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಾಗಾರವು ಫೆ.25ರಂದು ಬೆಳಗ್ಗೆ 9 ಗಂಟೆಗೆ ಕಂಕನಾಡಿಯಲ್ಲಿರುವ ಟ್ಯಾಲೆಂಟ್ ಸಭಾಂಗಣದಲ್ಲಿ ನಡೆಯಲಿದೆ.
ಎಂ.ಎನ್.ಸಿ, ಖಾಸಗಿ, ಅರೆ ಸರಕಾರಿ ಮತ್ತು ಸರಕಾರಿ ಉದ್ಯೋಗಗಳನ್ನು ಪಡೆಯಲು ಅಗತ್ಯವಿರುವ ವಿವಿಧ ಕೌಶಲ್ಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ನಾಲ್ಕು ಅವಧಿಗಳಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಸಂವಹನ ಸಂದರ್ಶನ ಕೌಶಲ್ಯ, ರೆಸ್ಯೂಮ್ ಬರೆಯುವುದು, ಆತ್ಮವಿಶ್ವಾಸ ಅಭಿವೃದ್ಧಿ ಗುರಿ ನಿರ್ಧಾರ ಮತ್ತು ಅಣಕು ಸಂದರ್ಶನ ವಿಷಯಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ಈಗಾಗಲೇ ಸ್ನಾತಕೋತ್ತರ ಮತ್ತು ಪದವಿ ಶಿಕ್ಷಣ ಪೂರ್ಣಗೊಳಿಸಿದ ಹಾಗೂ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಈ ತರಬೇತಿ ಆಯೋಜಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ, ಮಂಗಳೂರು-2, ಮೊಬೈಲ್-7760508664 ವಾಟ್ಸ್‌ಆ್ಯಪ್-9920916736 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.





