ಜಗತ್ತಿನ ಗಮನ ಸೆಳೆದ ನ್ಯೂಯಾರ್ಕ್‌ನ ಪುಟಿನ್-ಟ್ರಂಪ್ ಪ್ರಣಯದ ಚಿತ್ರ

ನ್ಯೂಯಾರ್ಕ್,ಫೆ.16: ಪ್ರೇಮಿಗಳ ದಿನವಾದ ಮಂಗಳವಾರ ರಾತ್ರಿ ನ್ಯೂಯಾರ್ಕ್‌ನ ಚೆಲ್ಸಿಯಾದಲ್ಲಿರುವ ನ್ಯೂಯಾರ್ಕ್ ಆ್ಯಪಲ್ ಸ್ಟೋರ್‌ಗೆ ಭೇಟಿ ನೀಡಿದವರಿಗೊಂದು ವಿಲಕ್ಷಣ ಅಚ್ಚರಿ ಕಾದಿತ್ತು. ‘ತುಂಬು ಗರ್ಭವತಿ’ಯಾಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುದ್ದಿಸುತ್ತಿರುವ ಬೃಹತ್ ಚಿತ್ರವನ್ನು ಅಲ್ಲಿ ಬಿಂಬಿಸಲಾಗಿತ್ತು.
ಎರಡು ರಸ್ತೆಗಳು ಸೇರುವ ಮೂಲೆಯಲ್ಲಿರುವ,ಆ್ಯಪಲ್ ಸ್ಟೋರ್ ಇರುವ ಕಟ್ಟಡದ ಪಾರ್ಶ್ವಗೋಡೆಯ ಮೇಲೆ ಈ ಚಿತ್ರ ಮೂಡಿಬಂದಿತ್ತು.
ಅಂದ ಹಾಗೆ ಈ ಕರಾಮತ್ತು ಮಾಡಿದ್ದು ಡೇಟಿಂಗ್ ಆ್ಯಪ್ ಹೇಟರ್. ಈ ಆ್ಯಪ್ ಇಬ್ಬರೂ ದ್ವೇಷಿಸುವ ವಿಷಯಗಳನ್ನು ಆಧರಿಸಿ ಡೇಟಿಂಗ್‌ಗೆ ಜೋಡಿಯನ್ನು ಕುದುರಿಸುತ್ತದೆ. ಹೇಟರ್‌ನ ಲಾಂಛನ ‘ತಲೆ ಕೆಳಗಾದ ಹೃದಯ ’ದ ಮುಂದೆ ಟ್ರಂಪ್-ಪುಟಿನ್ ಚಿತ್ರ ಕಾಣಿಸಿಕೊಂಡಿದ್ದು, ಜೊತೆಗೆ ‘ಲವ್ ಥ್ರೂ ಹೇಟ್(ದ್ವೇಷದ ಮೂಲಕ ಪ್ರೇಮ)’ ಎಂಬ ಕಂಪನಿಯ ಟ್ಯಾಗ್‌ಲೈನ್ ಜೊತೆ ಹ್ಯಾಷ್‌ಟ್ಯಾಗ್ ಕೂಡ ಇತ್ತು. ಹೇಟರ್‌ನ ಎರಡು ಲಕ್ಷಕ್ಕೂ ಅಧಿಕ ಬಳಕೆದಾರರಲ್ಲಿ ಸುಮಾರು ಶೇ.80ರಷ್ಟು ಜನರು ತಾವು ಟ್ರಂಪ್‌ರನ್ನು ದ್ವೇಷಿಸುತ್ತೇವೆ ಎಂದು ಹೇಳಿದ್ದಾರೆ.
ಹೇಟರ್ ಆ್ಯಪಲ್ ಸ್ಟೋರ್ ಜೊತೆಗೆ ನ್ಯೂಯಾರ್ಕ್ ನಗರದ ಇನ್ನೆರಡು ಸ್ಥಳಗಳಲ್ಲಿಯೂ ಇದೇ ಚಿತ್ರವನ್ನು ಬಿಂಬಿಸಿತ್ತು.







