ಸೋಲು ಒಪ್ಪಿಕೊಳ್ಳಲು ಪನ್ನೀರಸೆಲ್ವಂ ನಿರಾಕರಣೆ : ‘ಧರ್ಮ ಯುದ್ಧ ’ ಮುಂದುವರಿಸುವ ಘೋಷಣೆ

ಚೆನ್ನೈ,ಫೆ.16: ತಮಿಳುನಾಡು ಮುಖ್ಯಮಂತ್ರಿ ಗಾದಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಒ.ಪಿ.ಪನ್ನೀರಸೆಲ್ವಂ ಅವರು ಸೋತು ಸುಣ್ಣವಾಗಿದ್ದಾರಾದರೂ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಜನತೆಯ ಆಡಳಿತ ಸ್ಥಾಪನೆಯಾಗುವವರೆಗೂ ಈ ಧರ್ಮಯುದ್ದವು ಮುಂದುವರಿಯಲಿದೆ. ಈ ಕುಟುಂಬ(ಮನ್ನಾರಗುಡಿ)ವು ನಮ್ಮನ್ನು ಆಳಲು ಸಾಧ್ಯವಿಲ್ಲ ಎಂದು ಅವರು ಘೋಷಿಸಿದ್ದಾರೆ.
ತನ್ನ ರಾಜಕೀಯ ಪ್ರತಿಸ್ಪರ್ಧಿ ವಿ.ಕೆ.ಶಶಿಕಲಾರ ಅಭ್ಯರ್ಥಿ ಎಡಪ್ಪಾಡಿ ಪಳನಿಸ್ವಾಮಿ ಯವರನ್ನು ಸರಕಾರ ರಚಿಸುವಂತೆ ರಾಜ್ಯಪಾಲ ಸಿ.ವಿದ್ಯಾಸಾಗರ್ ಆಹ್ವಾನಿಸಿದ್ದಾರೆ ಎಂಬ ಪ್ರಕಟಣೆ ಹೊರಬಿದ್ದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪನ್ನೀರಸೆಲ್ವಂ ತುಂಬ ಹತಾಶರಾದಂತಿದ್ದರು.
ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳುವ ತನ್ನ ಪ್ರಯತ್ನದಲ್ಲಿ ಬೆಂಬಲವಾಗಿ ನಿಂತಿದ್ದ ಜನತೆಯನ್ನು, ವಿಶೇಷವಾಗಿ ಎಐಎಡಿಎಂಕೆಯ ಮಹಿಳಾ ಕಾರ್ಯಕರ್ತೆಯರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
Next Story