ಕರಾಟೆ: ಸೆಬಾಸ್ಟಿಯನ್ ಶಾಲಾ ವಿದ್ಯಾರ್ಥಿಗಳ ಸಾಧನೆ

ಮಂಗಳೂರು, ಫೆ.16: ಪೆರ್ಮನ್ನೂರು ಸೈಂಟ್ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಗಳಲ್ಲಿ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಶಾಲೆಯ 7ನೆ ತರಗತಿ ವಿದ್ಯಾರ್ಥಿ ಸಾಜಲ್ ರಾಷ್ಟ್ರಮಟ್ಟದ ಕುಮಿಟಿ ಸ್ಪರ್ಧೆಯಲ್ಲಿ ದ್ವಿತೀಯ, 8ನೆ ತರಗತಿಯ ಅಬ್ದುಲ್ ಬಾಶಿತ್ ರಾಜ್ಯಮಟ್ಟದ ಕುಮಿಟಿ ಸ್ಪರ್ಧೆಯಲ್ಲಿ 2 ಬಾರಿ ದ್ವಿತೀಯ ಹಾಗೂ ಒಂದು ಬಾರಿ ತೃತೀಯ, ರಾಜ್ಯಮಟ್ಟದ ಕಟಾ ವಿಭಾಗದಲ್ಲಿ 2 ಬಾರಿ ದ್ವಿತೀಯ ಹಾಗೂ ಒಮ್ಮೆ ತೃತೀಯ ಮತ್ತು 7ನೆ ತರಗತಿಯ ಶಿವ ಸೌರಭ್ ರಾಜ್ಯಮಟ್ಟದ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





