ತಮಿಳುನಾಡಿನ ನೂತನ ಮುಖ್ಯಮಂತ್ರಿ ಪಳನಿಸ್ವಾಮಿ ಪ್ರಮಾಣ

ಚೆನ್ನೈ,ಫೆ.16: ತಮಿಳುನಾಡಿನ 21ನೆ ಮುಖ್ಯ ಮಂತ್ರಿಯಾಗಿ ಎಐಎಡಿಎಂಕೆ ನಾಯಕಿ ಶಶಿಕಲಾ ಬಣದ ಎಡಪ್ಪಾಡಿ ಪಳನಿಸ್ವಾಮಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಉಸ್ತುವಾರಿ ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರು ಮುಖ್ಯ ಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ನೂತನ ಮುಖ್ಯ ಮಂತ್ರಿ ಪಳನಿ ಸ್ವಾಮಿ ಅವರೊಂದಿಗೆ ಸಚಿವ ಸಂಪುಟದ 30 ಮಂದಿ ಸಚಿವರು ಇದೇ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇದರೊಂದಿಗೆ ತಮಿಳುನಾಡಿನಲ್ಲಿ ಸರಕಾರ ರಚನೆಗೆ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಾ ಕೊನೆಗೊಂಡಿದ್ದು, ನೂತನ ಸರಕಾರ ರಚನೆಯಾಗಿದೆ.
ಜಯಲಲಿತಾ ಸಮಾಧಿಗೆ ಭೇಟಿ
ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯ ಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ರಾಜಭವನದಿಂದ ನೇರವಾಗಿ ಮರೀನಾ ಬೀಚ್‌ನಲ್ಲಿರುವ ಮಾಜಿ ಮುಖ್ಯ ಮಂತ್ರಿ ದಿವಂಗತ ಜೆ. ಜಯಲಲಿತಾ ಸಮಾಧಿ ಬಳಿ ತೆರಳಿ ಪುಷ್ಪನಮನ ಸಲ್ಲಿಸಿದರು.
The new Ministers and their portfolios:
Edappadi K. Palaniswami - Home, Finance, PWD, Irrigation, Highways, Public, Elections, Personnel
Dindigul Srinivasan – Forest
Sengottaiyan - School Education - He is the new minister. He is replacing MaFoi K. Pandiarajan.
O.S. Manian - Handlooms
Sellur Raju - Cooperation
C Vijaya Baskar - Health
D Jayakumar - Fisheries
M C Sampath - Industries
Karupannan - Environment
Thangamani - Electricity
Velumani - Municipal Administration
C.Ve Shanmugham - Law
K.P. Anbazhagan - Higher Education
Kamaraj - Food and Civil Supplies
V. Saroja - Social Welfare
K. Radhakrishnan - Housing and Urban Development
Duraikannu- Agriculture
Kadambur Raju - Information and Publicity
R.B. Udhayakumar - Revenue
Natarajan - Tourism
K.C. Veeramani - Commercial Taxes
K.T. Rajendra Balaji - Milk and Dairy Development
P.Benjamin - Rural Industries
Dr Nilofer Kafeel - Labour
M.R.Vijayabhaskar - Transport
Dr. M. Manikandan - Information Technology
V.M. Rajalakshmi - Adi Dravidar and Tribal Welfare
G. Baskaran - Khadi and Village Industries Board
Sevvoor S. Ramachandran - Hindu Religious and Charitable Endowments
S.Valarmathi - Backward Classes and Minorities Welfare
P. Balakrishna Reddy - Animal Husbandry