ಫೆ.18: ಸಹ್ಯಾದ್ರಿ ಕಾಲೇಜಿನಲ್ಲಿ 'ಕೋಡ್ ಕ್ವೆಸ್ಟ್' ಕಾರ್ಯಕ್ರಮ
ಮಂಗಳೂರು, ಫೆ.16: ವಿದ್ಯಾರ್ಥಿಗಳು, ವೃತ್ತಿಪರರು, ಸ್ಮಾರ್ಟ್ ಅಪ್ ಆರಂಭಿಸುವವರಿಗೆ ವಿವಿಧ ಸ್ಪರ್ಧೆಗಳನ್ನು ಒಳಗೊಂಡ 'ಕೋಡ್‌ಕ್ವೆಸ್ಟ್ 2ಕೆ 17' ಕಾರ್ಯಕ್ರಮ ಫೆ.18ರಂದು ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಾನ್ಸನ್ ಟೆಲ್ಲಿಸ್ ಹೇಳಿದರು.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಮಂಗಳೂರಿನಲ್ಲಿ ನಡೆಯುವ ಅತೀ ದೊಡ್ಡ ಸಾಫ್ಟ್‌ವೇರ್ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ ಹ್ಯಾಕಥಾಮ್, ಕಾರ್ಯಾಗಾರ, ಕೋಡಿಂಗ್ ಈವೆಂಟ್ಸ್, ತಾಂತ್ರಿಕ ಚರ್ಚೆಗಳು ನಡೆಯಲಿದ್ದು, 1 ಲಕ್ಷ ರೂ. ಬಹುಮಾನ ಗೆಲ್ಲುವ ಅವಕಾಶವಿದೆ ಎಂದರು.
ಡಿಟಿಲ್ಯಾಬ್ಸ್ ಮತ್ತು ಹೋಸ್ಟೆ ಜೈರೋವತಿಯಿಂದ ಅಂದು ಬೆಳಗ್ಗೆ 9ಕ್ಕೆ ಆರಂಭಗೊಳ್ಳುವ ಈ ಸ್ಪರ್ಧೆ 36 ಗಂಟೆಗಳ ಕಾಲ ನಡೆಯಲಿದೆ. 20ರಿಂದ 26 ವರ್ಷದೊಳಗಿನ ಯುವಕ-ಯುವತಿಯರು ಇದರಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ಪ್ರಮುಖ ಕಂಪೆನಿಗಳು ಕೈಜೋಡಿಸಿದೆ. ವಿವಿಧ ಉದ್ಯಮಗಳಲ್ಲಿ ಕೆಲಸ ಮಾಡುವವರನ್ನು ಭೇಟಿ ಮಾಡಲು 'ಕೋಡ್‌ಕ್ವೆಸ್ಟ್' ಅವಕಾಶ ಕಲ್ಪಿಸಿದೆ. ಹೊಸ ತಂತ್ರಜ್ಞಾನದಲ್ಲಿ ಹೊಸದಾಗಿ ಕಂಪೆನಿ ಆರಂಭಿಸುವವರಿಗ ಸೂಕ್ತ ಸಲಹೆ ಪಡೆಯಲೂ ಅವಕಾಶವಿದೆ.
ಆಸಕ್ತರು ಹೋಸ್ಟೆ ಜೈರೋದ ಸ್ಥಾಪಕ ನರೇಶ್ ಭಟ್ (ಮೊ.: 9480094011)ರನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ನರೇಶ್ ಭಟ್, ಕಾರ್ತಿಕ್ ಕೆ. ಉಪಸ್ಥಿತರಿದ್ದರು.







