ಜಿಷ್ಣುವಿನ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು: ವಿಎಸ್ ಅಚ್ಯುತಾನಂದನ್

ನಾದಾಪುರಂ,ಫೆ. 16: ಜಿಷ್ಣುವಿನ ನಿಗೂಢ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕೆಂದು ಕೇರಳ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಎಸ್ ಅಚ್ಯುತಾನಂದನ್ ಹೇಳಿದ್ದಾರೆ. ಜಿಷ್ಣು ಪ್ರಣೋಯಿ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಸಂತೈಸಿದ ಬಳಿಕ ಪತ್ರಕರ್ತರೊಡನೆ ಅವರು ಮಾತಾಡುತ್ತಿದ್ದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರು ತಮ್ಮ ಮನೆಗೆ ಭೇಟಿ ನೀಡಿಲ್ಲ ಎಂದು ಜಿಷ್ಣುವಿನ ಕುಟುಂಬದವರು ಈಗಾಗಲೇ ದುಃಖ ತೋಡಿಕೊಂಡಿದ್ದರು. ಇಂತಹ ಸ್ಥಿತಿಯಲ್ಲಿ ವಿಎಸ್ ಅಚ್ಯುತಾನಂದನ್‌ರ ಸಂದರ್ಶನ ಅವರಲ್ಲಿ ನಿರೀಕ್ಷೆ ಯುಂಟು ಮಾಡಿದೆ.
ನೆಹರೂ ಕಾಲೇಜು ಚೇರ್‌ಮೆನ್ ಕೃಷ್ಣದಾಸ್ ಸಹಿತ ಮೂವರ ವಿರುದ್ಧ ಆತ್ಮಹತ್ಯೆ ಪ್ರೇರಣೆ ಕೇಸು ದಾಖಲಾಗಿದೆ. ಆರೋಪಿಗಳನ್ನು ಈವರೆಗೂ ಬಂಧಿಸಲಾಗಿಲ್ಲ. ಇದರ ಕುರಿತು ಕುಟುಂಬದವರು ತಮ್ಮ ಅಸಮಾಧಾನವನ್ನು ಸೂಚಿಸಿದ್ದಾರೆ.
ಆರೋಪಿಗಳ ವಿರುದ್ಧ ಕೊಲೆಕೃತ್ಯವನ್ನು ದಾಖಲಿಸಬೇಕು. ಈಗ ಅಡಗಿ ಕೂತಿರುವ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರೆಯದಂತಾಗಬೇಕು. ಪ್ರಕರಣಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಉದಯಬಾನುರನ್ನು ನೀಡಬೇಕೆಂದು ಮೃತ ಜಿಷ್ಣು ಕುಟುಂಬದವರು ವಿಎಸ್ ಅಚ್ಯುತಾನಂದನ್‌ರನ್ನು ಆಗ್ರಹಿಸಿದ್ದಾರೆಂದು ವರದಿ ತಿಳಿಸಿದೆ.







