ಚಿಕ್ಕಮಗಳೂರು: ಜಿಪಂ ಸಿಇಓ ಕಾರಿಗೆ ಕಲ್ಲು, ಗ್ಲಾಸು ಪುಡಿ

ಚಿಕ್ಕಮಗಳೂರು, ಫೆ.16: ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಆರ್. ರಾಗಪ್ರಿಯ ಅವರ ಸರಕಾರಿ ಕಾರಿಗೆ ಜಿಲ್ಲಾ ಪಂಚಾಯತ್ ಬಳಿ ಕಲ್ಲು ತೂರಿ ಹಾನಿಗೊಳಿಸಿರುವ ಘಟನೆ ಗುರುವಾರ ನಡೆದಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಆರ್ ರಾಗಪ್ರಿಯ ಅವರ ಕಾರಿನ ಚಾಲಕ ಜಿಲ್ಲಾ ಪಂಚಾಯತ್ ಎದುರು ನಿಲ್ಲಿಸಿದ್ದ ಸಂದರ್ಭದಲ್ಲಿ ಕಾರಿನ ಗ್ಲಾಸ್ ಪುಡಿ, ಪುಡಿಯಾಗಿರುವ ದೃಶ್ಯ ಕ್ಷಣ ಕಾಲ ಅಧಿಕಾರಿಗಳು, ಪೊಲೀಸರು ಹಾಗೂ ಅಲ್ಲಿದ್ದ ಸಾರ್ವಜನಿಕರನ್ನು ಕ್ಷಣ ಕಾಲ ದಂಗು ಬಡಿಸಿತು.
ಸಿಇಓ ಡಾ. ಆರ್. ರಾಗಪ್ರಿಯ ಬಳಸುವ ಕಾರಿನ ಮೇಲೆ ಕಲ್ಲು ತೂರಿ ಹಾನಿಗೊಳಿಸಲಾಗಿದೆ. ಇದರಿಂದ ಸುಮಾರು 20 ಸಾವಿರ ರೂ. ಅಧಿಕ ನಷ್ಟವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾನಸಿಕ ಅಸ್ವಸ್ಥನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
Next Story





