ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿಗೆ 2 ರ್ಯಾಂಕ್‌ಗಳು

ಕಲ್ಯಾಣಪುರ, ಫೆ.16: ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಮೇ ತಿಂಗಳಲ್ಲಿ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ.
ದ್ವಿತೀಯ ಎಂಎಸ್‌ಡಬ್ಲೂನ ಮಹಾದೇವ್ ಮ್ಯಾಗೇರಿ ಐದನೇಯ ರ್ಯಾಂಕ್ ಪಡೆದರೆ, ಎಂಕಾಂನಲ್ಲಿ ಶೆರಿಲ್ ವಿಜಿಲಿ ಏಳನೇಯ ರ್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.
Next Story





