ಫೆ.18ರಂದು ತಮಿಳುನಾಡಿನ ನೂತನ ಸಿಎಂ ಪಳನಿಸ್ವಾಮಿ ವಿಶ್ವಾಸಮತ

ಚೆನ್ನೈ, ಫೆ.16:ತಮಿಳುನಾಡಿನ ನೂತನ ಮುಖ್ಯ ಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಫೆ.18ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.
ವಿಶ್ವಾಸಮತ ಯಾಚನೆಗೆ ವಿಶೇಷ ಅಧಿವೇಶನ ಕರೆದಿರುವ ಬಗ್ಗೆ ವಿಧಾನಸಭೆಯ ಕಾರ್ಯದರ್ಶಿ ಜಮಾಲುದ್ದೀನ್ ಸುತ್ತೋಲೆ ಹೊರಡಿಸಿದ್ದಾರೆ. ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಇಂದು ಅಧಿಕಾರ ವಹಿಸಿಕೊಂಡಿರುವ ಪಳನಿಸ್ವಾಮಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರಲ್ಲಿ 15 ದಿನಗಳ ಕಾಲಾವಕಾಶ ಕೇಳಿದ್ದರು.ಪಳನಿಸ್ವಾಮಿ ತಮಗೆ 124ಶಾಸಕರ ಬೆಂಬಲ ಇದೆ ಎಂದು ಹೇಳಿದ್ದಾರೆ. ವಿಶ್ವಾಸ ಮತ ಗೆಲ್ಲಲು 118 ಶಾಸಕರ ಬೆಂಬಲ ಅಗತ್ಯ
Next Story





