ರಾಜಸ್ತಾನ: ಎಕೆ-56 ರೈಫಲ್, ಮದ್ದುಗುಂಡು ವಶಕ್ಕೆ

ಜೈಪುರ, ಫೆ.16: ಶ್ರೀಗಂಗಾನಗರ ಜಿಲ್ಲೆಯ ಬಿ.ಪಿ. ಮೈನರ್ ಸೇತುವೆಯ ಬಳಿ ಗೋಣಿಚೀಲದಲ್ಲಿ ಮುಚ್ಚಿಟ್ಟಿದ್ದ ಎಕೆ-56 ರೈಫಲ್ ಹಾಗೂ 95 ಸಜೀವ ಮದ್ದುಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ ಸ್ಥಳದಲ್ಲಿ ಬಳಸಲಾದ ಕೆಲವು ಮದ್ದುಗುಂಡುಗಳು, ಸಜೀವ ಕೋವಿಗುಂಡುಗಳು ಪತ್ತೆಯಾಗಿವೆ. ಇವನ್ನು ಥರ್ಮಾಕೋಲ್ ಶೀಟ್‌ಗಳಲ್ಲಿ ಸುತ್ತಿ ಗೋಣಿಚೀಲದೊಳಗೆ ಇಡಲಾಗಿತ್ತು. ಗ್ರಾಮಸ್ಥರು ಈ ಕುರಿತು ನೀಡಿದ ದೂರಿನಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಇವನ್ನು ವಶಕ್ಕೆ ಪಡೆದರು. ರೈಫಲ್‌ನ ಮೇಲೆ ಪಿಜೆಬಿಡಿ (ಜಲಾಲಾಬಾದ್, ಪಂಜಾಬ್)ಎಂದು ಬರೆಯಲಾಗಿದೆ.ಪ್ರಕರಣದ ಕುರಿತು ವಿವಿಧ ಕೋನಗಳಿಂದ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Next Story





