ಮಾರ್ದೋಮ್ ರಕ್ಷಿತಾರಣ್ಯದಲ್ಲಿ ಬ್ರಾಹ್ಮಿ ಲಿಪಿ ಶಿಲೆಪತ್ತೆ
.jpg)
ಕಾಸರಗೋಡು, ೆ.16: ಕಾಸರಗೋಡಿನ ಬಳಾಲ್‌ನ ಮಾರ್ದೋಮ್ ರಕ್ಷಿತಾರಣ್ಯ ದಲ್ಲಿ ಸುಮಾರು 6 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಬ್ರಾಹ್ಮಿ ಲಿಪಿಯ ಶಿಲೆ ಕಲ್ಲುಗಳು ಪತ್ತೆಯಾಗಿದ್ದು, ಎರಡೂವರೆ ವರ್ಷಗಳ ಅವಯಲ್ಲಿ ಇದು ಎರಡನೆ ಬಾರಿ ಇತಿಹಾಸದ ಶಿಲಾ ಕಲ್ಲುಗಳು ಗೋಚರಿಸಿವೆ.
ಈ ರಕ್ಷಿತಾರಣ್ಯದಲ್ಲಿ ಶಿಲೆಗಳು ಇರುವುದಾಗಿ ಈ ಹಿಂದೆಯೇ ಪ್ರಾಚ್ಯ ವಸ್ತು ಇಲಾಖೆಯ ಗಮನಕ್ಕೆ ಸೆಳೆದರೂ ಈ ಬಗ್ಗೆ ಅಧ್ಯಯನ ನಡೆಸಲು ಮುಂದೆ ಬಂದಿಲ್ಲ. ಉತ್ಖನನ ಮಾಡಿದರೆ ಪ್ರಾಚೀನ ಜನಜೀವನದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
2015ರ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಶಿಲೆಕಲ್ಲುಗಳು ಪತ್ತೆಯಾಗಿದ್ದವು. ಈ ಶಿಲೆ ಕಲ್ಲುಗಳ ಬಗ್ಗೆ ಸಂಶೋಧಕರಾದ ನಂದಕುಮಾರ್ ಕೋರೋತ್ ಮತ್ತು ಸಿ.ಪಿ.ರಾಜೀವನ್ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿತ್ತು.
ಈ ಪರಿಸರದಲ್ಲಿ 6 ಸಾವಿರ ವರ್ಷ ಗಳಿಗೂ ಹಳೆಯ 20ಕ್ಕೂ ಅಕ ಶಿಲಾ ಕೆತ್ತನೆಗಳು ಮತ್ತು ಮೂರ್ತಿಗಳು ಪತ್ತೆಯಾಗಿತ್ತು. ಶಿಲಾ ಕೆತ್ತನೆಗಳು ಇಲ್ಲಿನ ಗುಹೆಗಳ ಕಂಬಗಳಂತೆ ಕಂಡುಬಂದಿವೆ. ಸಾವಿರಾರು ವರ್ಷಗಳ ಪುರಾತನ ಈ ಗುಹೆಯ ಪ್ರವೇಶದ್ವಾರ ಈಗ ಭಾಗಶ: ಕುಸಿದಿದ್ದು, ಗುಹೆಗಳ ಗೋಡೆಗಳಲ್ಲಿ ಕೆಲ ಲಿಪಿಗಳನ್ನು ಚಿತ್ರಿಸಲಾಗಿದೆ. ದನ, ಆನೆ, ಶ್ವಾನ ಸೇರಿದಂತೆ ಕೆಲ ಕಾಡು ಪ್ರಾಣಿಗಳ ಕೆತ್ತನೆಯನ್ನೂ ಮಾಡಲಾಗಿದೆ.
ಈ ಶಿಲೆಗಳನ್ನು ದಶಕಗಳ ಹಿಂದೆ ಬುಡಕಟ್ಟು ಜನಾಂಗದ ಮುಖ್ಯಸ್ಥರು ಆಸನಕ್ಕಾಗಿ ಬಳಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಧರ್ಮಾಧಾರಿತ ಕೆಲ ಆಚರಣೆಗೂ ಈ ಶಿಲಾ ಕಲ್ಲುಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ.
ರಕ್ಷಿತಾರಣ್ಯದಿಂದ ಆನೆಗಳು ನಾಡಿಗಿಳಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಗೋಡೆ ಕಟ್ಟುವ ಕೆಲಸ ನಡೆಯುತ್ತಿರುವ ಸಂದರ್ಭ ನೆಲ ಅಗೆಯುತ್ತಿದ್ದಾಗ ಶಿಲೆಗಳು ಪತ್ತೆಯಾಗಿವೆ. ಮೂರು ವರ್ಷಗಳ ಹಿಂದೆ ಇದೇ ರಕ್ಷಿತಾರಣ್ಯದ ಇನ್ನೊಂದು ಬದಿಯಲ್ಲಿ ಇಂತಹ ಶಿಲೆಗಳು ಪತ್ತೆಯಾದ್ದವು.
ಈ ಬಗ್ಗೆ ಆರ್ಕಿಯಾಲಿಜಿಕಲ್ ಸರ್ವೇ ಆ್ ಇಂಡಿಯಾಗೆ ಮತ್ತು ಜಿಯಾಲಾಜಿಕಲ್ ಸರ್ವೇ ಆ್ ಇಂಡಿಯಾಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.







