ಕರ್ಣಾಟಕ ಬ್ಯಾಂಕ್‌ನಲ್ಲಿ ಎನ್‌ಪಿಎಸ್ ಆರಂಭ

ಮಂಗಳೂರು, ಫೆ.16: ಕರ್ಣಾಟಕ ಬ್ಯಾಂಕ್ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ಗುರುವಾರದಿಂದ ಆರಂಭಿಸಿದೆ. ಈ ಸಂದರ್ಭ ಮಾತನಾಡಿದ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ ಭಟ್, ಭಾರತ ಸರಕಾರದ ಈ ಯೋಜನೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಜನಸಾಮಾನ್ಯರು 18ರಿಂದ 60ವರ್ಷದವರೆಗೆ ಈ ಯೋಜನೆಯಲ್ಲಿ ಉಳಿತಾಯ ಮಾಡಬಹುದು. 50 ಸಾವಿರ ರೂ. ಉಳಿತಾಯದವರೆಗೆ ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. ‘ಈ ಯೋಜನೆಯಿಂದ ಜನಸಾಮಾನ್ಯರಿಗೆ ಸಾಮಾಜಿಕ ಭದ್ರತೆಯ ಇನ್ನೊಂದು ಅವಕಾಶ ದೊರೆತಂತಾಗಿದೆ. ಸಮಾಜದ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಯೋಜನೆ ಒಂದು ಹೆಜ್ಜೆಯಾಗಿದೆ’ ಎಂದು ತಿಳಿಸಿದರು.
Next Story





