ಜಿದ್ದಾದಲ್ಲಿ ಹೃದಯಾಘಾತದಿಂದ ಭಾರತೀಯ ವ್ಯಕ್ತಿ ನಿಧನ
ಜಿದ್ದಾ, ಫೆ. 17: ಅರಿಕ್ಕೋಡ್ ಪುಕ್ಕೋಟ್ಟುಚೋಲದ ತೆಂಙುಚಾಲಿನ ಶಿಹಾಬುದ್ದೀನ್ (34) ಜಿದ್ದಾದಲ್ಲಿ ಹೃದಯಾಘಾತದಿಂದ ನಿಧನರಾದರು. ಅಬೂಹೂರ್ನ ವಾಸಸ್ಥಳದಲ್ಲಿ ಬುಧವಾರ ಬೆಳಗ್ಗೆ ಅವರು ನಿಧನರಾಗಿದ್ದು ಫುಟ್ಬಾಲ್ ಆಟಗಾರ ಕೂಡಾಆಗಿದ್ದರು.
ಇತ್ತೀಚೆಗಷ್ಟೇ ಹೊಸ ಮನೆಯ ಗೃಹಪ್ರವೇಶ ಸಮಾರಂಭಮುಗಿಸಿ ಊರಿಂದ ಜಿದ್ದಾಕ್ಕೆ ಮರಳಿದ್ದರು. ಆರುತಿಂಗಳ ಹಿಂದೆ ಇವರ ಅಣ್ಣ ಅಶ್ರಫ್ ಹೃದಯಾಘಾತದಿಂದಲೇ ಊರಲ್ಲಿ ನಿಧನರಾಗಿದ್ದರು. ಶಿಹಾಬುದ್ದೀನ್ರ ಪಾರ್ಥಿವಶರೀರವನ್ನು ಜಿದ್ದಾದ ಕಿಂಗ್ ಫಹದ್ ಆಸ್ಪತ್ರೆಯಲ್ಲಿರಿಸಲಾಗಿದೆ. ಜಿದ್ದಾದಲ್ಲಿಯೇ ದಫನ ಕಾರ್ಯನಡೆಸಲಾಗುವುದು ಎಂದು ವರದಿ ತಿಳಿಸಿದೆ.
Next Story