ಅಂಕೋಲಾ, ಓಮ್ನಿ ಸೇರಿದಂತೆ 1ಲಕ್ಷ 67 ಸಾವಿರ ರೂ. ಮೌಲ್ಯದ ಅಕ್ರಮ ಸರಾಯಿ ವಶ

ಅಂಕೋಲಾ, ಫೆ.17: ತಾಲೂಕಿನ ಭಾವಿಕೇರಿ ಕೇಣಿರಸ್ತೆಯೊಂದರಲ್ಲಿ ಮಾರುತಿ ಓಮ್ನಿ ವಾಹನದಲ್ಲಿ ಅಕ್ರಮ ಗೋವಾ ಸರಾಯಿ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಇಲ್ಲಿಯ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ನಡೆಸಿ ವಾಹನ ಸೇರಿ ಅಕ್ರಮ ಸರಾಯಿ ವಶಪಡಿಸಿಕೊಂಡ ಘಟನೆ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
ಓಮ್ನಿ ವಾಹದನಲ್ಲಿದ್ದ 3 ಮೂಟೆಗಳಲ್ಲಿ ವಿವಿಧ ಮಾದರಿಯ ಅಕ್ರಮ ಸರಾಯಿ ಸೇರಿದಂತೆ ಸುಮಾರು 1ಲಕ್ಷ 67 ಸಾವಿರ ರೂ ಮೌಲ್ಯ ಎಂದು ಅಂದಾಜಿಸಲಾಗಿದೆ. ಅಬಕಾರಿ ಉಪ ಆಯುಕ್ತ ಎನ್.ಎಸ್.ಶ್ಯಾಮ್ ಅವರ ಆದೇಶದ ಮೇರೆಗೆ ಅಬಕಾರಿ ನಿರೀಕ್ಷಕ ಎನ್.ಯು. ಶಾಹಾ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ದಾಳಿಯಲ್ಲಿ ಸುರೇಶ ಪಿ. ಹಾರೊಗೊಪ್ಪ, ರಂಜನಾ ಡಿ. ನಾಯ್ಕ, ರಾಮಚಂದ್ರ ನಾಯ್ಕ, ವಿಠ್ಠಲ ನಾಯ್ಕ, ವೆಂಕಟೇಶ ನಾಯ್ಕ, ವಾಹನ ಚಾಲಕ ನಾಗರಾಜ ನಾಯ್ಕ ಪಾಲ್ಗೊಂಡಿದ್ದರು.
Next Story





