Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಸಿನೆಮಾ ಹೊಸ ಕಾಲದ ಜನಪದ ಭಾಷೆ

ಸಿನೆಮಾ ಹೊಸ ಕಾಲದ ಜನಪದ ಭಾಷೆ

ರಂಗನಾಥ ಕಂಟನಕುಂಟೆರಂಗನಾಥ ಕಂಟನಕುಂಟೆ17 Feb 2017 5:55 PM IST
share
ಸಿನೆಮಾ ಹೊಸ ಕಾಲದ ಜನಪದ ಭಾಷೆ

ಚಿತ್ರ ಮೂಲದಲ್ಲಿ ಒಂದು ಮೂಕಿ ಚಿತ್ರವಾಗಿರುವುದರಿಂದ ಅದರ ಕತೆಯನ್ನು ನೋಡಿಯೇ ಗ್ರಹಿಸಬೇಕಾಗಿರುತ್ತದೆ. ಆ ಮೂಲಕ ಚಿತ್ರದ ಆಶಯವನ್ನು ತಿಳಿಯಬೇಕಾಗುತ್ತದೆ. ಆದರೆ ಕೆಲವೊಮ್ಮೆ ಹಾಗೆ ಗ್ರಹಿಸಲು ಸಾಧ್ಯವಾಗದೇ ಹೋಗಬಹುದು. ಅಂತಹ ಸನ್ನಿವೇಶದಲ್ಲಿ ಅದರ ಕತೆಯ ನೆರವು ಅಗತ್ಯವಿರುತ್ತದೆ. ಅಂತಹ ಅಗತ್ಯವೊಂದನ್ನು ಕನ್ನಡದ ಸಂದರ್ಭದಲ್ಲಿ ಸುಭಾಷ್ ರಾಜಮಾನೆಯವರು ಆ ಚಿತ್ರದ ಕತೆಯನ್ನು ಕನ್ನಡೀಕರಿಸುವುದರ ಮೂಲಕ ಈಡೇರಿಸಿದ್ದಾರೆ.

ನಮ್ಮ ಕಾಲದಲ್ಲಿ ಕೊಂಚ ಸಮಯ ಸಿಕ್ಕರೆ ಜನರು ಚರ್ಚೆಗೆ ಆರಿಸಿಕೊಳ್ಳುವ ಮುಖ್ಯಸಂಗತಿಗಳೆಂದರೆ ಕ್ರಿಕೆಟ್, ಸಿನೆಮಾ ಮತ್ತು ಧಾರಾವಾಹಿಗಳ ವಿಚಾರಗಳೇ ಆಗಿವೆ. ಅಷ್ಟರಮಟ್ಟಿಗೆ ಜನರು ಇವುಗಳ ಬಗೆಗೆ ಮಾತಿಗಿಳಿಯುತ್ತಾರೆ. ಬಸ್ಸು, ರೈಲು, ಶಾಲೆ-ಕಾಲೇಜು, ಕಚೇರಿ-ಮನೆ ಎಲ್ಲಿ ಬೇಕಾದರೂ ಇದನ್ನು ಕಾಣಬಹುದು. 

ಎಷ್ಟೋ ಸಂದರ್ಭದಲ್ಲಿ ತಮ್ಮನ್ನು, ತಮ್ಮ ಮನೆಯನ್ನು ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗೆಗೆ ಯೋಚಿಸಲು ಪುರಸೊತ್ತಿಲ್ಲದವರು; ಈ ಸಂಗತಿಗಳ ಬಗೆಗೆ ಚರ್ಚೆ ಮಾಡಿಯೇ ಮಾಡುತ್ತಾರೆ. ಇದು ಈ ಕಾಲಮಾನದ ಯುಗದ ಜನಪದ ಧರ್ಮದಂತೆ ಪ್ರಬಲ ಜನಪ್ರಿಯ ಸಂಸ್ಕೃತಿಯಾಗಿ ಬೆಳೆದಿದೆ. ಇದಕ್ಕೆ ಅತೀತವಾಗಿ ಬದುಕಲು ಇಂದು ಸಾಧ್ಯವೇ ಇಲ್ಲ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಇದು ಜಾಗತಿಕ ವಿದ್ಯಮಾನವೂ ಹೌದು.

ಇದರಲ್ಲಿ ಬಡವ-ಶ್ರೀಮಂತ, ಹೆಣ್ಣು-ಗಂಡು, ಚಿಕ್ಕವರು-ದೊಡ್ಡವರು, ಈ ಊರು ಆ ಊರು ಇತ್ಯಾದಿ ಯಾವ ಅಂತರವೂ ಇಲ್ಲ. ಈ ಎಲ್ಲ ಎಲ್ಲೆಗಳನ್ನು ಮೀರಿ ಜನರು ಇವುಗಳ ಪ್ರಭಾವದಲ್ಲಿ ಬೊಂಬೆಗಳಂತೆ ರೂಪುಗೊಂಡಿದ್ದಾರೆ. ತಮ್ಮ ಖಾಸಗಿ ಬದುಕಿಗಿಂತ ಹೆಚ್ಚಾಗಿ ಈ ಬಗೆಗೆ ತಲೆಕೆಡಿಸಿಕೊಳ್ಳುತ್ತಾರೆ. ಜನರಿಗೆ ತಮ್ಮ ಖಾಸಗಿ ಬದುಕಿಗಿಂತ ಈ ಸಂಗತಿಗಳೇ ಹೆಚ್ಚು ಮುಖ್ಯವೆಂಬಂತೆ ಬಿಂಬಿಸಲಾಗಿರುವುದರಿಂದ ಜನರು ಅವುಗಳನ್ನು ದಿಟವೆಂದೇ ನಂಬಿದ್ದಾರೆ.

ಮಾರುಕಟ್ಟೆಯೇ ಬದುಕು, ಅಭಿವೃದ್ಧಿ ಎಂಬ ಭಾವನೆ ಬೆಳೆದಿದ್ದು ಅದು ಮಾಯೆಯಂತೆ ಎಲ್ಲರನ್ನು ಆವರಿಸಿಕೊಂಡಿದೆ. ಇಂದು ಇದರಿಂದ ಜನರನ್ನು ಪಾರುಮಾಡುವುದು ಕಷ್ಟಸಾಧ್ಯವಾಗಿದೆ.

ಇಂತಹ ಸನ್ನಿವೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ಚಲನಚಿತ್ರ ಮತ್ತು ದೂರದರ್ಶನಗಳು. ದೂರದರ್ಶನವಂತೂ ಎಲ್ಲವನ್ನೂ ಮನೆಯೊಳಗಡೆಗೆ ತಂದು ಕೂಡಿಹಾಕಿ ಮಾಯಾಲೋಕ ಸೃಷ್ಟಿಸುವ ಸಾಧನವಾಗಿದೆ. ಇದೇ ಇಂದು ಲೋಕವನ್ನು ಬೆಸೆದಿರುವ ಪ್ರಮುಖ ಸಾಧನ. ಇದಿಲ್ಲದಿದ್ದರೆ ಕ್ರಿಕೆಟ್, ಸಿನೆಮಾ, ಧಾರಾವಾಹಿಗಳು ಅಷ್ಟು ಪ್ರಭಾವಿಯಾಗಿ ಜನಮಾನಸವನ್ನು ಪ್ರವೇಶಿಸಲು ಸಾಧ್ಯವೇ ಇರಲಿಲ್ಲ. ಅದರಲ್ಲಿಯೂ ಕೊಳ್ಳುವವರು ಮತ್ತು ಮಾರುವವರನ್ನು ಜೋಡಿಸಿರುವುದೇ ಇದು.

ಇದು ಮನೆಮನಗಳನ್ನು ಪ್ರವೇಶ ಮಾಡಿದ ಮೇಲೆ ನಮ್ಮ ನಾಡಿನ ಸಾಮಾಜಿಕ ಸಾಂಸ್ಕೃತಿಕ ಬದುಕಿನಲ್ಲಿ ಅಲ್ಲೋಲ ಕಲ್ಲೋಲಗಳೇ ನಡೆದಿವೆ. ಅಷ್ಟು ಪ್ರಭಾವಿಯಾಗಿ ದೂರದರ್ಶನ ಮತ್ತು ಚಲನಚಿತ್ರಗಳು ಜನಮಾನಸವನ್ನು ಆವರಿಸಿವೆ.

ಇದರ ಸವಾಲು ಸಮಸ್ಯೆಗಳು ಏನೇ ಇರಲಿ. ದೂರದರ್ಶನ ಮತ್ತು ಚಲನಚಿತ್ರಗಳು ಬಹಳ ಪರಿಣಾಮಕಾರಿ ಮಾಧ್ಯಮವಾಗಿ ಬೆಳೆದಿರುವುದಂತೂ ದಿಟ ಮತ್ತು ಇವು ಎಲ್ಲ ಗಡಿಗಳ ಗೆರೆಗಳನ್ನೂ ಮೀರಿ ಪ್ರಪಂಚಪೂರ ಹರಿದಾಡುವುದುಂಟು. ಲೋಕದ ಯಾವುದೋ ಮೂಲೆಯಲ್ಲಿ ಯಾವುದೋ ಭಾಷೆಯಲ್ಲಿ ತಯಾರಾದ ಚಿತ್ರಗಳು, ಧಾರಾವಾಹಿಗಳು ಮತ್ತಾವುದೋ ಮೂಲೆಯಲ್ಲಿರುವ ಅಜ್ಞಾತ ಲೋಕದ ಜನರನ್ನು ತಲುಪುತ್ತವೆ.

ಸೂಜಿಗಲ್ಲಿನಂತೆ ಸೆಳೆದುಕೊಂಡು ತಮ್ಮ ವಶಕ್ಕೆ ತೆಗೆದುಕೊಂಡುಬಿಡುತ್ತವೆ. ಹಾಗಾಗಿಯೇ ಜನರ ಮನಸ್ಸನ್ನು ಮೊದಲು ವಶಪಡಿಸಿಕೊಳ್ಳಬೇಕಾದರೆ ಈ ಎರಡು ಮಾಧ್ಯಮಗಳನ್ನು ವಶಪಡಿಸಿಕೊಂಡರೆ ಸಾಕು; ಇಡೀ ಪ್ರಪಂಚವನ್ನು ವಶಪಡಿಸಿಕೊಳ್ಳುವುದು ಸುಲಭವಾಗಿಬಿಡುತ್ತದೆ ಎಂಬ ಭಾವನೆ ಮೂಡುವ ಮಟ್ಟಿಗೆ ಇದು ಪ್ರಭಾವಿ.

ಇಂತಹ ಪ್ರಭಾವ ವಲಯದ ನಡುವೆಯೇ ನಮ್ಮ ನಾಡಿನ ಜನರಿಗೆ ಕಿಂಚಿತ್ತು ಪರಿಚಯವೇ ಇಲ್ಲದ ದೇಶವೊಂದರ ಸಂಸ್ಕೃತಿಯನ್ನು ಅನಾವರಣಗೊಳಿಸುವ ಚಲನಚಿತ್ರಗಳು ಬಹುಬೇಗ ಜನರ ಕೈಸೇರುವ ಸನ್ನಿವೇಶ ಇಂದಿನದು. ಅದರಲ್ಲಿ ಅಂತರ್ಜಾಲತಾಣಗಳು ರೂಪುಗೊಂಡ ಮೇಲಂತೂ ಇದು ಇನ್ನೂ ಹೆಚ್ಚಾಗಿದೆ.

ಎಂತಹದೇ ಚಿತ್ರ ಕೂಡ ಇಂದು ಬೆರಳ ತುದಿಯಲ್ಲಿ ವಿವಿಧ ಜಾಲತಾಣಗಳಲ್ಲಿ ಲಭ್ಯವಾಗಲಿದೆ. ಅಂದರೆ ಅಷ್ಟು ವೇಗವಾಗಿ ಮತ್ತು ಸುಲಭವಾಗಿ ಜನರಿಗೆ ಚಲನಚಿತ್ರಗಳು ಲಭ್ಯವಾಗಲಿವೆ. ಅದರಲ್ಲಿಯೂ ಆಸ್ಕರ್‌ನಂತಹ ಪ್ರಶಸ್ತಿಗಳು ಸಿನೆಮಾ ಜಗತ್ತಿನ ಅತ್ಯುತ್ತಮ ಪ್ರಶಸ್ತಿಗಳಾಗಿರುವುದರಿಂದ ಅಂತಹ ಪ್ರಶಸ್ತಿಗಳನ್ನು ಗಳಿಸಿದ ಚಿತ್ರಗಳು ದಿನಬೆಳಗಾಗುವುದರಲ್ಲಿ ಲೋಕಪ್ರಸಿದ್ಧಿಯಾಗಿಬಿಡುತ್ತವೆ.

ಇಂತಹ ಲೋಕ ಪ್ರಸಿದ್ದಿಯ ಚಿತ್ರಗಳಲ್ಲಿ ಒಂದು ‘ದಿ ಆರ್ಟಿಸ್ಟ್’. ಇದು 2011ರಲ್ಲಿ ತಯಾರಾದ ಫ್ರೆಂಚ್ ಭಾಷೆಯ ಮೂಕಿಚಿತ್ರ. ಅದೇ ವರ್ಷದಲ್ಲಿ 5 ಆಸ್ಕರ್ ಪ್ರಶಸ್ತಿ ಗಳಿಸಿದ ಈ ಚಿತ್ರ ಬಹಳ ಜನಪ್ರಿಯವಾದುದು. ಸಿನೆಮಾ ರಸಿಕರಿಗಂತೂ ಇದು ಅಚ್ಚುಮೆಚ್ಚಿನದು. ಇದರ ವಸ್ತು ಹೊಸದೇನಲ್ಲವಾದರೂ ಅದನ್ನು ಸಿನೆಮಾ ಭಾಷೆಯಲ್ಲಿ ಪರಿಣಾಮಕಾರಿಯಾಗಿ ರೂಪಿಸಿದ್ದು ಮಹತ್ವದ್ದು. ಆರ್. ಕೆ. ನಾರಾಯಣ್ ಅವರ ‘ಗೈಡ್’ ಕಾದಂಬರಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ತಯಾರಿಸಿದ್ದ ಹಿಂದಿ ಚಿತ್ರದ ವಸ್ತುವಿನ ಜೊತೆ, ಆಶಿಕಿ-2, ಕನ್ನಡದ ಪ್ರಸಿದ್ಧ ಚಿತ್ರ ‘ರಂಗನಾಯಕಿ’ಗಳ ಜೊತೆ ಈ ಚಿತ್ರದ ವಸ್ತುವಿನ ಸಾಮ್ಯತೆಯಿದೆ. ಇಂತಹ ಎಷ್ಟೋ ಕತೆಗಳು ನಮ್ಮ ವೃತ್ತಿರಂಗಭೂಮಿಯಲ್ಲಿವೆ.

ಮುಖ್ಯವಾಗಿ ಈ ಚಿತ್ರವು ನಾಯಕ ನಟನೊಬ್ಬ ನಟಿಯೊಬ್ಬಳ ಬೆಳವಣಿಗೆಗೆ ನೆರವಾಗಿ, ಅವಳು ಬೆಳೆಯುತ್ತಹೋದಂತೆ ಆ ನಟ ಚಿತ್ರರಂಗದಲ್ಲಿ ಅವಸಾನವನ್ನು ಹೊಂದುವುದನ್ನು ಅನಾವರಣಗೊಳಿಸುತ್ತದೆ ಮತ್ತು ಎರಡು ತಲೆಮಾರುಗಳ ಸಂಘರ್ಷ ಇಲ್ಲಿದೆ. ಮೂಕಿ ಚಿತ್ರಗಳ ಕಾಲ ಮುಗಿದು ಮಾತಿನ ಚಿತ್ರಗಳು ಹೆಚ್ಚಾಗ ತೊಡಗಿದ ನಂತರ ಹಳೆಯ ಮೂಕಿ ಚಿತ್ರಗಳ ಕಲಾವಿದರು ಹೇಗೆ ಅವಸಾನ ಹೊಂದಿದರೂ ಎಂಬುದನ್ನು ಇದು ಅನಾವರಣ ಗೊಳಿಸುತ್ತದೆ. ಅಂದರೆ ಸಾಮಾಜಿಕ ಸಾಂಸ್ಕೃತಿಕ ಬದಲಾವಣೆಯ ಸಂಕ್ರಮಣ ಕಾಲದ ತಲ್ಲಣಗಳನ್ನು ಈ ಚಿತ್ರ ಪರಿಣಾಮಕಾರಿ ದೃಶ್ಯಗಳ ಮೂಲಕ ಕಟ್ಟಿಕೊಡುತ್ತದೆ. ಒಟ್ಟು ಸಿನೆಮಾದ ವಿನ್ಯಾಸ, ಕಲಾತ್ಮಕತೆ ಇತ್ಯಾದಿ ಎಲ್ಲ ವಿಭಾಗಗಳಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಮೆರೆದಿದೆ. ಅಂತಹ ಒಂದು ಸಿನೆಮಾ ನೋಡುಗರನ್ನು ಸೆಳೆದು ಅದರ ಜೊತೆಗೆ ವಿವಿಧ ಬಗೆಯ ಅನುಸಂಧಾನ ನಡೆಸುವಂತೆ ಮಾಡಿದೆ. ಆ ಮೂಲಕ ಸಿನೆಮಾ ಜಗತ್ತನ್ನು ಗೆದ್ದಿದೆ.

ಇಂತಹ ಯಶಸ್ವಿ ಮತ್ತು ಲೋಕ ಪ್ರಸಿದ್ಧವಾದ ಫ್ರೆಂಚ್‌ನ ಮೂಕಿ ಸಿನೆಮಾ ‘ದಿ ಆರ್ಟಿಸ್ಟ್’ನ ಚಿತ್ರಕತೆಯನ್ನು ಡಾ. ಸುಭಾಷ್ ರಾಜಮಾನೆ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಚಿತ್ರ ಮೂಲದಲ್ಲಿ ಒಂದು ಮೂಕಿ ಚಿತ್ರವಾಗಿರುವುದರಿಂದ ಅದರ ಕತೆಯನ್ನು ನೋಡಿಯೇ ಗ್ರಹಿಸಬೇಕಾಗಿರುತ್ತದೆ.

ಆ ಮೂಲಕ ಚಿತ್ರದ ಆಶಯವನ್ನು ತಿಳಿಯಬೇಕಾಗುತ್ತದೆ. ಆದರೆ ಕೆಲವೊಮ್ಮೆ ಹಾಗೆ ಗ್ರಹಿಸಲು ಸಾಧ್ಯವಾಗದೇ ಹೋಗಬಹುದು. ಅಂತಹ ಸನ್ನಿವೇಶದಲ್ಲಿ ಅದರ ಕತೆಯ ನೆರವು ಅಗತ್ಯವಿರುತ್ತದೆ. ಅಂತಹ ಅಗತ್ಯವೊಂದನ್ನು ಕನ್ನಡದ ಸಂದರ್ಭದಲ್ಲಿ ಸುಭಾಷ್ ರಾಜಮಾನೆಯವರು ಆ ಚಿತ್ರದ ಕತೆಯನ್ನು ಕನ್ನಡೀಕರಿಸುವುದರ ಮೂಲಕ ಈಡೇರಿಸಿದ್ದಾರೆ. ಕನ್ನಡ ಓದುಗರು ಆ ಚಿತ್ರವನ್ನು ನೋಡುವ ತಿಳಿಯುವ ಮತ್ತು ಮುಖಾಮುಖಿಗೆ ಬೇಕಾಗುವ ಪೂರಕ ಪಠ್ಯವೊಂದನ್ನು ಅನುವಾದದ ಮೂಲಕ ಸಿದ್ಧಪಡಿಸಿದ್ದಾರೆ.(ಪುಸ್ತಕಕ್ಕಾಗಿ 9481863524)

ಇಲ್ಲಿ ಸಿನೆಮಾವೇ ಕೊನೆಗೆ ನಿಲ್ಲುವುದಾದರೂ ಅದನ್ನು ನೋಡಿ ತಿಳಿಯಲು ಇಂತಹ ಅನುವಾದಗಳು ನೆರವಾಗುತ್ತವೆ. ಇಂತಹ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ನೋಡುತ್ತಾರೆಯಾದರೂ ಅದಕ್ಕೆ ಬೇಕಾದ ಪೂರಕ ಸಾಹಿತ್ಯ ನಿರ್ಮಾಣ ಅಷ್ಟಾಗಿ ಇದುವರೆಗೂ ನಡೆದಿಲ್ಲ. ಕೆ.ವಿ. ಸುಬ್ಬಣ್ಣ ಮುಂತಾದವರಿಂದ ‘ಬೈಸಿಕಲ್ ಥೀವ್ಸ್’ ಚಿತ್ರಕತೆಯ ಅನುವಾದದ ಮೂಲಕ ಇದು ಆರಂಭವಾಗಿದ್ದರೂ ಇದು ಹೆಚ್ಚು ಬೆಳೆದು ಮುಂದುವರಿದಿಲ್ಲ.

ಈ ಮೊದಲು ಸಿನೆಮಾ ಹಾಡುಗಳ ಸಾಹಿತ್ಯ ಚಿಕ್ಕ ಚಿಕ್ಕ ಪುಸ್ತಕಗಳ ರೂಪದಲ್ಲಿ ಮುದ್ರಣಗೊಂಡು ಅವು ಬಳಕೆಗೊಳ್ಳುತ್ತಿದ್ದವು. ಈಚೆಗೆ ಅದೂ ತಪ್ಪಿದೆ. ಅಂದರೆ ಸಿನೆಮಾ ಪ್ರಪಂಚ ಪ್ರಬಲವಾಗಿ ಬೆಳೆಯುತ್ತಿದ್ದರೂ ಅದರ ಬಗೆಗಿನ ಸಾಹಿತ್ಯ ನಿರ್ಮಿತಿ ಮಾತ್ರ ಶೈಶವಾವಸ್ಥೆಯಲ್ಲಿಯೇ ಇದೆ. ಅದರ ಬಗೆಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.

ಇಂತಹ ಹೊತ್ತಿನಲ್ಲಿ ಆ ಕೊರತೆ ನೀಗುವಂತಹ ಕೆಲಸ ಇಂತಹ ಅನುವಾದಗಳ ಮೂಲಕ ನಡೆದಿದೆ. ಪ್ರೇಕ್ಷಕರಿಗೆ ಅಗತ್ಯ ಇರುವ ಸಾಹಿತ್ಯ ದೊರೆಯುವಂತಾಗಿದೆ. ಇದು ಮುಂದುವರಿಯಬೇಕಷ್ಟೆ. ಅಂತಹ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿರುವ ರಾಜಮಾನೆ ಮತ್ತು ಅಂತಹವರಿಂದ ಇನ್ನಷ್ಟು ಸಿನೆಮಾ ಸಾಹಿತ್ಯ ನಿರ್ಮಾಣಗೊಂಡು ಕನ್ನಡಿಗರಿಗೆ ದೊರಕುವಂತಾಗಲಿ. ಆ ಮೂಲಕ ವೈವಿಧ್ಯಮಯವಾದ ಸಾಹಿತ್ಯ ಕನ್ನಡದಲ್ಲಿ ನಿರ್ಮಾಣವಾಗಲಿ.

share
ರಂಗನಾಥ ಕಂಟನಕುಂಟೆ
ರಂಗನಾಥ ಕಂಟನಕುಂಟೆ
Next Story
X