ಕುಂದಾಪುರ: ಕರಾವಳಿ ಸೌಹಾರ್ದ ರ‍್ಯಾಲಿಯ ಪ್ರಚಾರ ಜಾಥಕ್ಕೆ ಚಾಲನೆ

ಕುಂದಾಪುರ, ಫೆ.17: ಮಂಗಳೂರಿನಲ್ಲಿ ನಡೆಯಲಿರುವ ಕರಾವಳಿ ಸೌಹಾರ್ಹ ರ‍್ಯಾಲಿಯ ಉಡುಪಿ ಜಿಲ್ಲಾ ಪ್ರಚಾರ ವಾಹನ ಜಾಥಕ್ಕೆ ಶುಕ್ರವಾರ ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ಚಾಲನೆ ನೀಡಲಾಯಿತು.
ಸಿಪಿಎಂ ಜಿಲ್ಲಾ ಮುಖಂಡ ಎಚ್.ನರಸಿಂಹ ಜಾಥವನ್ನು ಉದ್ಘಾಟಿಸಿ, ಕರಾವಳಿಯ ಕೋಮುವಾದಿ ರಾಜಕಾರಣಕ್ಕೆ ಪಾಟಾಳಿ ಕೃಷ್ಣಯ್ಯ, ಪ್ರವೀಣ ಪೂಜಾರಿ, ಹನೀಫ್‌ರವರಂತಹ ಬಡಜೀವಗಳು ಬಲಿಯಾಗಿವೆ. ಮೋದಿ ಸರಕಾರದ ಅಧಿಕಾರ ಅವಧಿಯಲ್ಲಿ ಇಂತಹ ಬಲಿಗಳು ಹೆಚ್ಚಾಗುತ್ತಿವೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಮುಖಂಡರಾದ ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ, ರಮೇಶ್ ಪೂಜಾರಿ, ರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ವಿ., ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು ಮೊದಲಾದವರು ಉಪಸ್ಥಿತರಿದ್ದರು.
Next Story





