ಕುಂದಾಪುರ: ಶಿಕ್ಷಕ ಭೋಜು ಹಾಂಡರಿಗೆ ಬೆಳಕಿನ ಶ್ರದ್ದಾಂಜಲಿ

ಕುಂದಾಪುರ, ಫೆ.17: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಅವರಿಗೆ ಹೆಮ್ಮಾಡಿಯ ಡಿವೈಎಫ್‌ಐ ವತಿಯಿಂದ ಶ್ರದ್ದಾಂಜಲಿ ಸಭೆಯನ್ನು ಗುರುವಾರ ಹೆಮ್ಮಾಡಿ ಪೇಟೆಯಲ್ಲಿ ಆಯೋಜಿಸಲಾಗಿತ್ತು.
ಭೋಜು ಹಾಂಡ ಅವರ ಭಾವಚಿತ್ರವನ್ನಿಟ್ಟು ಪುಷ್ಪನಮನ ಸಲ್ಲಿಸಿ, ಮೊಂಬತ್ತಿ ಹೊತ್ತಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಶಿಕ್ಷಕ ಹಾಗೂ ಕುಂದಾಪುರ ಸಮುದಾಯ ಸಂಘಟನೆಯ ಕಾರ್ಯದರ್ಶಿ ಸದಾನಂದ ಬೈಂದೂರು ನುಡಿ ನಮನ ಸಲ್ಲಿಸಿದರು.
ಡಿವೈಎಫ್‌ಐ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ, ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ರಮೇಶ ಹಾಂಡ, ಡಿವೈಎಫ್‌ಐ ಸಂಘಟನೆಯ ವೆಂಕಟೇಶ, ಹರೀಶ, ನಾಗೇಶ, ಸುರೇಶ, ಪ್ರದೀಪ ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಯ ಜಗದೀಶ್ ಆಚಾರ್, ರಾಮ ಕುಲಾಲ್, ವಾಸು ಕಟ್ಟು, ಲಕ್ಷ್ಮಣ್ ಉಪಸ್ಥಿತರಿದ್ದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಸ್ವಾಗತಿಸಿದರು. ಡಿವೈಎಫ್‌ಐ ಕಾರ್ಯದರ್ಶಿ ವಿಘ್ನೇಶ್ ವಂದಿಸಿದರು.
Next Story





