ಅಭಿವೃದ್ಧಿ ವಿರೋಧಿಗಳನ್ನು ದೂರವಿಡಬೇಕಾದೀತು: ಪಿಣರಾಯಿ ವಿಜಯನ್
.jpg)
ತಿರುವನಂತಪುರಂ,ಫೆ. 17: ಅಭಿವೃದ್ಧಿ ಚಟುವಟಿಕೆಗಳನ್ನು ವಿರೋಧಿಸುವವರನ್ನು ನಾಡಿನ ಒಳಿತಿನ ಉದ್ದೇಶದಿಂದ ದೂರವಿರಿಸಬೇಕಾದೀತೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ವಿದ್ಯುತ್ ಲೈನ್ ಎಳೆಯುವ ಕೆಲಸಕ್ಕೆ ಕೆಲವರು ಮರಗಳು ಕಡಿಯಬೇಕಾಗುತ್ತದೆ ಎಂದು ಹೇಳುವ ಮೂಲಕ ಅಡ್ಡಿ ಪಡಿಸುತ್ತಿದ್ದಾರೆ. ಇಂತಹವರು ನಾಡಿನ ವಿದ್ಯುತ್ ಆವಶ್ಯಕತೆಯನ್ನು ಪೂರೈಸುವ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಭೂಮಿಯ ಅಡಿಯಲ್ಲಿ ಗ್ಯಾಸ್ ಪೈಪ್ ಎಳೆಯುವುದನ್ನೂ ಕೆಲವರು ವಿರೋಧಿಸುತ್ತಿದ್ದಾರೆ.
ಇಂತಹ ವಿರೋಧಗಳನ್ನೆಲ್ಲ ಎದುರಿಸಬೇಕಾಗುತ್ತದೆ. ನಾಡಿನ ಅಭಿವೃದ್ಧಿಗಾಗಿ ಕೆಲವು ನಷ್ಟಗಳನ್ನು ಸಹಿಸಲೇ ಬೇಕಾಗುತ್ತದೆ. ವಿರೋಧ ವ್ಯಕ್ತಪಡಿಸುವವರನ್ನು ದೂರ ಇಡದೆ ನಿರ್ವಾಹವಿಲ್ಲ. ಯಾರದೇ ವಿರುದ್ಧ ಯುದ್ಧಘೋಷಣೆಯಾಗಿದೆ ಎಂದು ಇದನ್ನು ತಿಳಿಯಬೇಕಾಗಿಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದರೆಂದು ವರದಿ ತಿಳಿಸಿದೆ.
Next Story





