ರಾಜ್ಯಮಟ್ಟದ ವರ್ಣೋತ್ಸವ ಸ್ಪರ್ಧೆ: ನಿಟ್ಟೆ ಮಹಾವಿದ್ಯಾಲಯ ಪ್ರಥಮ

ಶಿರ್ವ, ಫೆ.17: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ "ವರ್ಣೋತ್ಸವದಲ್ಲಿ ನಿಟ್ಟೆಯ ಎನ್.ಎಂ.ಎ.ಎಂ ತಾಂತ್ರಿಕ ಮಹಾವಿದ್ಯಾಲಯ ತಂಡವು ಪ್ರಥಮ ಹಾಗೂ ಮೂಡಬಿದ್ರೆಯ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ತಂಡವು ದ್ವಿತೀಯ ಪ್ರಶಸ್ತಿ ಗೆದ್ದು ಕೊಂಡಿವೆ.
ಸ್ಪರ್ಧೆಯನ್ನು ಉಡುಪಿ ಸೋದೆ ಮಠದ ಕಾರ್ಯದರ್ಶಿ ರತ್ನಕುಮಾರ್ ಉದ್ಘಾಟಿಸಿದರು.
ಸಂಸ್ಥೆಯ ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್, ಮಠದ ಆಡಳಿತಾಧಿಕಾರಿ ರಾಘವೇಂದ್ರ ತಂತ್ರಿ, ತಾಂತ್ರಿಕ ಸಲಹೆಗಾರ ಹರೀಶ್ ಬೆಳ್ಮಣ್, ಕಾರ್ಯಕ್ರಮದ ಸಂಯೋಜಕ ಸಿಜು ವಿ.ಸೋಮನ್ ಉಪಸ್ಥಿತರಿದ್ದರು.
ವರ್ಣೋತ್ಸವದಲ್ಲಿ ರಾಜ್ಯದ 15 ತಾಂತ್ರಿಕ ಮಹಾವಿದ್ಯಾಲಯಗಳ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಕಾಲೇಜಿನ ಅಧ್ಯಕ್ಷ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಗೌರವ ನಿರ್ದೇಶಕ ಪ್ರೊ.ಡಾ.ರಾಧಾಕೃಷ್ಣ ಎಸ್.ಐತಾಳ್, ಸಾಂಸ್ಕೃತಿಕ ಸಂಯೋಜಕಿ ಸುಬ್ಬಲಕ್ಷ್ಮಿ ಎನ್. ಕಾರಂತ್, ತಾಂತ್ರಿಕ ಸಂಯೋಜಕ ರಾಜೇಶ್ ನಾಯಕ್ ಉಪಸ್ಥಿತರಿದ್ದರು. ನಂತರ ಸಂಸ್ಥೆಯ ವಿದ್ಯಾರ್ಥಿ ಮತ್ತು ಸಿಬ್ಬಂದಿವರ್ಗದವ ರಿಂದ ಶ್ವೇತಕುಮಾರ ಚರಿತ್ರೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.







