ಅಂಕೋಲಾದಲ್ಲಿ ಗಿರಿಜನ ಅಧ್ಯಯನ ಶಿಬಿರ

ಉಡುಪಿ, ಫೆ.17: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮತ್ತು ಯಲ್ಲಾಪುರ ಬುಡಕಟ್ಟು ಶೈಕ್ಷಣಿಕ ಮತ್ತು ಪರಿಸರ ಅಭಿವೃದ್ಧಿ ಟ್ರಸ್ಟ್‌ನ ಸಹಯೋಗದಲ್ಲಿ ಕಾಲೇಜಿನ ಸಮಾಜಕಾರ್ಯದ ವಿದ್ಯಾರ್ಥಿಗಳ ಏಳು ದಿನಗಳ ಗಿರಿಜನ ಅಧ್ಯಯನ ಶಿಬಿರವು ಇತ್ತೀಚೆಗೆ ಅಂಕೋಲಾ ತಾಲೂಕಿನ ಕೈಗಡಿ ಗ್ರಾಮದಲ್ಲಿ ಜರಗಿತು.
ಮಿಲಾಗ್ರಿಸ್ ಕಾಲೇಜಿನ ಪ್ರಥಮ ಎಂ.ಎಸ್.ಡಬ್ಲ್ಯೂನ 27 ವಿದ್ಯಾರ್ಥಿ ಗಳು ಮತ್ತು ಸಮಾಜ ಕಾರ್ಯ ವಿಭಾಗದ ಇಬ್ಬರು ಉಪನ್ಯಾಸಕರು ಈ ಶಿಬಿರದಲ್ಲಿ ಭಾಗವಹಿಸಿ ಸಿದ್ಧಿ ಮತ್ತು ಕುಣುಬಿ ಬುಡಕಟ್ಟು ಸಮುದಾಯಗಳ ಬಗ್ಗೆ ಅಧ್ಯಯನ ನಡೆಸಿದರು.
Next Story





