ಪ್ರತಿಭಾ ಸಿಂಚನ: ಕುಂದಾಪುರ ರೇಂಜ್ ಪ್ರಥಮ
ಉಡುಪಿ, ಫೆ.15: ಉಡುಪಿ ಜಿಲ್ಲಾ ಸುನ್ನೀ ಜಂಇಯ್ಯತುಲ್ ಮುಅಲ್ಲಿ ಮೀನ್ ವತಿಯಿಂದ ಮೂಳೂರು ಸಿರಾಜುಲ್ ಇಸ್ಲಾಂ ಅರಬಿ ಮದ್ರಸದ ವಠಾರದಲ್ಲಿ ಇತ್ತೀಚೆಗೆ ಜರಗಿದ ಪ್ರತಿಭಾ ಸಿಂಚನ ಕಾರ್ಯಕ್ರಮದಲ್ಲಿ ಕುಂದಾಪುರ ರೇಂಜ್ ಪ್ರಥಮ ಮತ್ತು ಉಡುಪಿ ರೇಂಜ್ ದ್ವಿತೀಯ ಸ್ಥಾನ ವನ್ನು ಗೆದ್ದುಕೊಂಡಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಅಲ್‌ಹಾಜ್ ಅಬೂಬಕ್ಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ನಈಮಿ ಮೂಳೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹ್ರೂಂ ತಾಜುಲ್ ಉಲಮಾ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ ಮೂಳೂರು ಹೈದರಾಲಿ ಅಹ್ಸನಿ ನೇತೃತ್ವದಲ್ಲಿ ಜರಗಿತು.
ಹನೀಫ್ ಸಅದಿ ನಾವುಂದ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಏಳು ರೇಂಜ್‌ಗಳ ಸ್ಪರ್ಧಾಳುಗಳು ಮತ್ತು ನಾಯಕ ರುಗಳು ಭಾಗವಹಿಸಿದ್ದರು.
Next Story





