ಪಡುಬಿದ್ರಿ: ಯುಪಿಸಿಎಲ್ ಪುನರ್ವಸತಿ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ

ಪಡುಬಿದ್ರಿ, ಫೆ.17: ಎಲ್ಲೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಯುಪಿಸಿಎಲ್ ಹಾಗೂ ಅದಾನಿ ಫೌಂಡೇಷನ್ ಸಂಸ್ಥೆಯ ವತಿಯಿಂದ ತೆಂಕ ಗ್ರಾಮದ ಯುಪಿಸಿಎಲ್ ಪುನರ್ವಸತಿ ಕೇಂದ್ರದಲ್ಲಿ ರೂ. ಲಕ್ಷದ ವೆಚ್ಚದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶುಕ್ರವಾರ ಯುಪಿಸಿಎಲ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಜಂಟಿ ಅಧ್ಯಕ್ಷರಾದ ಕಿಶೋರ್ ಆಳ್ವ ಅವರು ಉದ್ಘಾಟಿಸಿದರು.
5ಬಳಿಕ ಮಾತನಾಡಿದ ಅವರು, ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲು ಈ ಘಟಕ ಸ್ಥಾಪಿಸಲಾಗಿದ್ದು, ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಟ್ಟು ಶುದ್ಧ ಕುಡಿಯುವ ನೀರಿನ ಘಟಕವನ್ನು ಅದಾನಿ ಯುಪಿಸಿಎಲ್ ಸ್ಥಾಪಿಸಿದೆ ಎಂದರು.
ನಿರ್ವಸಿತ ಕುಟುಂಬ ಸದಸ್ಯರಿಗೆ ಹೆಚ್ಚಿನ ಭೂ ಮೌಲ್ಯದ ಜೊತೆಗೆ, ಕಂಪನಿಯಲ್ಲಿ ಉದ್ಯೋಗಾವಕಾಶ, ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ, ಸಹಿತ ಮೂಲಸೌಕರ್ಯವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಯುಪಿಸಿಎಲ್ ಕಂಪನಿಯ ಏ.ಜಿ.ಎಂ ಗಿರೀಶ್ ನಾವಡ, ಪ್ರಬಂಧಕ ರವಿ ಜೀರೆ, ವಸಂತ್ ಕುಮಾರ್, ಅದಾನಿ ಫೌಂಡೇಶನ್‌ನ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ, ಧೀರಜ್ ದೇವಾಡಿಗ, ಶಿವಪ್ರಸಾದ್ ಶೆಟ್ಟಿ, ಚಂದ್ರಮೋಹನ್ ಉಪಸ್ಥಿತರಿದ್ದರು.





