ಉಳ್ಳಾಲದಲ್ಲಿ ಪೊಲೀಸರ ಬಿಗಿ ಬಂದೊಬಸ್ತ್ : ಕ್ಯಾಮರಾ ಕಣ್ಗಾವಲು

ಉಳ್ಳಾಲ, ಫೆ.17: ಪಿಎಫ್‌ಐ ಸಂಘಟನೆಯ ಯುನಿಟಿ ಮಾರ್ಚ್ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಉಳ್ಳಾಲದ ವಿವಿದೆಡೆ ಕ್ಯಾಮರಾ ಕಣ್ಗಾವಲು ಇರಿಸಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಉಳ್ಳಾಲ ಪರಿಸರದ ಪ್ರಮುಖ ಭಾಗಗಳಲ್ಲಿ ಕ್ಯಾಮರಾಗಳನನ್ನು ಅಳವಡಿಸಲಾಗಿದ್ದು, ತೊಕ್ಕೊಟ್ಟು, ಮಾಸ್ತಿಕಟ್ಟೆ, ಕೋಡಿ, ಕೋಟೆಪುರ, ದರ್ಗಾ ವಠಾರ, ಮುಕ್ಕಚ್ಚೇರಿ, ಅಬ್ಬಕ್ಕ ವೃತ್ತದ ಭಾಗಗಳಲ್ಲಿ ವೀಡಿಯೋ ಕ್ಯಾಮರಾಗಳನ್ನು ಇರಿಸಲಾಗಿದೆ.
ಪಿಎಫ್‌ಐ ವತಿಯಿಂದ ಉಳ್ಳಾಲದಲ್ಲಿ ಶುಕ್ರವಾರ ಯುನಿಟಿ ಮಾಚ್‌ರ್ ಆಯೋಜಿಸಲಾಗಿತ್ತು. ಆದರೆ ಜಿಲ್ಲಾಡಳಿತದಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮಂಗಳೂರಿಗೆ ಸ್ಥಳಾಂತರಗೊಂಡಿದೆ. ಹಾಗೂ ಉಳ್ಳಾಲ ಭಾಗದಲ್ಲಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದಾರೆ.
Next Story





