ದೇರಳಕಟ್ಫೆ: .19ರಂದು ಕಿನ್ಯ ಬುಖಾರಿ ಸೆಂಟರ್‌ನಲ್ಲಿ ಪ್ರತಿನಿಧಿ ಸಮಾವೇಶ
ದೇರಳಕಟ್ಟೆ, ಫೆ.17: ಎಸ್.ವೈ.ಎಸ್. ಮತ್ತು ಎಸೆಸೆಫ್ ಪ್ರತಿನಿಧಿ ಸಮಾವೇಶವು ರವಿವಾರ ಮಧ್ಯಾಹ್ನ 3 ಗಂಟೆಗೆ ಕಿನ್ಯ ಬದ್ರಿಯಾ ನಗರದ ಬುಖಾರಿ ಮಸೀದಿ ಸಭಾಂಗಣದಲ್ಲಿ ನಡೆಯಲಿದೆ.
ಎಸ್‌ವೈಎಸ್ ದ.ಕ. ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್. ವೈ.ಎಸ್. ರಾಜ್ಯ ಉಪಾಧ್ಯಕ್ಷ ಎಂ.ಪಿ. ಅಶ್ರಫ್ ಸಅದಿ ಮುಲ್ಲ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಅಬ್ದುಲ್ ರಹ್ಮಾನ್ ದಾರಿಮಿ ಕೂಟಂಬಾರ ಭಾಷಣ ಮಾಡಲಿದ್ದಾರೆ. ಸಯ್ಯದ್ ಜಲಾಲ್ ತಂಙಳ್ ಎಸ್.ಕೆ .ಖಾದರ್ ಹಾಜಿ ಮುಡಿಪು, ಏಷಿಯನ್ ಬಾವಾ ಹಾಜಿ, ದೇರಳಕಟ್ಟೆ ಕತ್ತರ್ ಬಾವಾ ಹಾಜಿ, ಎನ್.ಎಸ್ ಉಮರ್ ಮಾಸ್ಟರ್, ಕೆ.ಸಿ.ರೋಡ್, ಮುಹಮ್ಮದ್ ಹಾಜಿ ಕಂಡಿಕ ಮಂಜನಾಡಿ, ಅಬ್ದುಲ್ ರಝ್ಝೆಕ್ ಆಲಡ್ಕ ಹರೇಕಳ ಮುಂತಾದವರು ಮುಖ್ಯಅತಿಥಿಗಳಾಗಿ ಭಾಗವಸಲಿದ್ದಾರೆ.
ಪ್ರಸ್ತುತ ತರಬೇತಿಯು ಎಸ್.ವೈ.ಎಸ್. ಉಳ್ಳಾಲ, ತಲಪಾಡಿ, ದೇರಳಕಟ್ಟೆ, ಮಂಜನಾಡಿ, ಮುಡಿಪು, ಹರೇಕ ಸೆಂಟರ್‌ಗಳು ಹಾಗೂ ಎಸ್.ಎಸ್.ಎಫ್ ಉಳ್ಳಾಲ ಡಿವಿಷನ್ ವ್ಯಾಪ್ತಿಯ ಎಲ್ಲಾ ಸೆಕ್ಟರ್‌ಗಳ ಕಾರ್ಯಕಾರಿ ಸಮಿತಿ ಸದಸ್ಯರು ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಎಚ್. ಇಸ್ಮಾಯೀಲ್ ಸಅದಿ ಕಿನ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





