ಚುನಾವಣಾ ರ್ಯಾಲಿಗಳ ನೇರ ಪ್ರಸಾರವನ್ನು ಪಾವತಿ ಸುದ್ದಿಯಾಗಿ ಘೋಷಿಸಲು ಸಿಪಿಐ ಆಗ್ರಹ

ಲಕ್ನೋ,ಫೆ.17: ಟಿವಿ ಚಾನೆಲ್‌ಗಳಲ್ಲಿ ಚುನಾವಣಾ ರ್ಯಾಲಿಗಳ ನೇರ ಪ್ರಸಾರವನ್ನು ಪಾವತಿ ಸುದ್ದಿಯನ್ನಾಗಿ ಘೋಷಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿರುವ ಸಿಪಿಐ, ಎಲ್ಲ ರಾಜಕೀಯ ಪಕ್ಷಗಳಿಗೆ ಸಮಾನ ಸ್ಪರ್ಧೆಯ ಅವಕಾಶವಿರುವಂತೆ ನೋಡಿಕೊಳ್ಳುವಂತೆ ಕೋರಿದೆ.
ಸಂಪನ್ಮೂಲ ಹೊಂದಿರುವ ಕೆಲವು ಪಕ್ಷಗಳು ತಮ್ಮ ಬಹಿರಂಗ ಸಭೆಗಳು ಮತ್ತು ಸುದ್ದಿಗೋಷ್ಠಿಗಳು ಟಿವಿ ವಾಹಿನಿಗಳಲ್ಲಿ ನೇರವಾಗಿ ಸಂಪೂರ್ಣ ಪ್ರಸಾರವಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ಅವಕಾಶ ಎಲ್ಲ ರಾಜಕೀಯ ಪಕ್ಷಗಳಿಗೂ ಸಮಾನವಾಗಿ ವಿಸ್ತರಣೆಯಾಗಿಲ್ಲ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಕುಮಾರ್ ಅಂಜಾನ್ ಅವರು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
Next Story