ಶಂಕಾಸ್ಪದ ಠೇವಣಿಯ ಕುರಿತ ಪ್ರಶ್ನೆಗೆ ಉತ್ತರಿಸದವರಿಗೆ ಐಟಿ ಇಲಾಖೆಯಿಂದ ಪತ್ರ

ಹೊಸದಿಲ್ಲಿ, ಫೆ.17: ನೋಟು ಅಮಾನ್ಯದ 50 ದಿನ ಅವಧಿಯಲ್ಲಿ 18 ಲಕ್ಷ ಜನರಿಗೆ ಸೇರಿದ ಸುಮಾರು 4.5 ಲಕ್ಷ ಕೋಟಿ ಮೊತ್ತದ ಶಂಕಾಸ್ಪದ ಠೇವಣಿಯ ಬಗ್ಗೆ ಆದಾಯ ತೆರಿಗೆ ಇಲಾಖೆ ಪರಿಶೀಲನೆ ನಡೆಸುತ್ತಿದ್ದು , ಈ ಕುರಿತು ಇಲಾಖೆಯು ಕಳುಹಿಸಿರುವ ಮೊಬೈಲ್ ಮತ್ತು ಇ-ಮೇಲ್ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದವರಿಗೆ ಪತ್ರ ಬರೆುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ 7 ಲಕ್ಷಕ್ಕೂ ಹೆಚ್ಚು ಮಂದಿ ಠೇವಣಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದು ಉಳಿದವರಿಗೆ ‘ಸ್ವಚ್ಛ ಹಣ ಅಭಿಯಾನ’ದಡಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಠೇವಣಿಯ ಮೂಲದ ವಿವರಣೆ ನೀಡುವಂತೆ ಪತ್ರ ಕಳುಹಿಸಲಾಗುವುದು. ಉತ್ತರ ನೀಡಿರುವ 7 ಲಕ್ಷ ಜನರಲ್ಲಿ ಶೇ.99ರಷ್ಟು ಮಂದಿ ಮಾಹಿತಿ ಸರಿಯಾಗಿದೆ ಎಂದು ತಿಳಿಸಿದ್ದಾರೆ . ಈ 18 ಲಕ್ಷ ಮಂದಿಯಲ್ಲಿ ಸುಮಾರು 5 ಲಕ್ಷದಷ್ಟು ಜನ ಇ-ಫೈಲಿಂಗ್ ಫೋರ್ಟರ್‌ನಲ್ಲಿ ನೋಂದಣಿ ಮಾಡಿಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story