ಮಂಗಳೂರು: ಫೆ18ರಂದು ಮಂಜನಾಡಿಯಲ್ಲಿ ಸೌಹಾರ್ದ ಸಮಾವೇಶ
ಮಂಗಳೂರು, ಫೆ. 17: ಮಂಜನಾಡಿ ಹಝ್ರತ್ ಅಸ್ಸಯ್ಯಿದ್ ಇಸ್ಮಾಯೀಲ್ ವಲಿಯುಲ್ಲಾಹ್ ಅವರ ಹೆಸರಿನಲ್ಲಿ ನಡೆಯುತ್ತಿದ್ದ ಉರೂಸ್ ಕಾರ್ಯಕ್ರಮ ಪ್ರಯುಕ್ತ ಫೆ. 18ರಂದು ಸಂಜೆ ಮಸೀದಿ ವಠಾರದಲ್ಲಿ ಸೌಹಾರ್ದ ಸಮಾವೇಶ ಜರಗಲಿದೆ.
ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಅಹ್ಮದ್ ಬಾಖವಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ರಮಾನಾಥ ರೈ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕರಾದ ಜೆ.ಆರ್. ಲೋಬೊ, ಮೊದಿನ್ ಬಾವಾ, ಪನೀರ್ ಚರ್ಚ್ ಧರ್ಮಗುರು ಫಾದರ್ ಡೆನ್ನಿಸ್ ಸುವ್ರೈಸ್, ವೈ ಅಬ್ದುಲ್ಲ ಕುಂಞಿ, ಪೊಲೀಸ್ ಉಪ ಆಯುಕ್ತ ಶಾಂತರಾಜ್, ಕೊಣಾಜೆ ಇನ್ಸ್‌ಪೆಕ್ಟರ್ ಅಶೋಕ್, ಸಂತೋಷ್ ಕುಮಾರ್ ಬೋಳಿಯಾರ್, ಸಂತೋಷ್ ಅಸೈಗೋಳಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





